Monday, March 19, 2018

ಪ್ರಕೃತಿಯ ಪಾಠ

ಪ್ರಕೃತಿಯ ಪಾಠ ೧ : ಅವಧೂತನು ಬೆಂಕಿಯಿಂದ ಕಲಿತ ಪಾಠ :
ಬೆಂಕಿಯನ್ನು ನೋಡಿ ನಾವು ಅದರಂತೆ ತೇಜಸ್ವಿಗಳಾಗಬೇಕು, ಅಂದರೆ ಅದು ಬೇರೆಯವರಿಗೆ ಕೊಡುವ ಬೆಳಕಿನ ಹಾಗೆ ಬೇರೆಯವರ ಬಾಳಿಗೆ ಬೆಳಕು ಕೊಡುವಂತವರಾಗಬೇಕು. ಬೆಂಕಿ ಕತ್ತಲನ್ನ  ಓಡಿಸತ್ತೆ, ಹಾಗೆ ನಾವು ನಮ್ಮಲ್ಲಿರುವ ಅಜ್ನ್ಯಾನವನ್ನು ಓಡಿಸಬೇಕು.
ಬೆಂಕಿ ಹೇಗೆ ಸೌದೆಯನ್ನು ಇಟ್ಟಷ್ಟು ಸುಟ್ಟು ಇನ್ನು ಪ್ರಜ್ವಲಿಸತ್ತೊ ಹಾಗೆ ನಾವು ತಪಸ್ಸಿನಿಂದ ( ಸದ್ವಿಚಾರಗಳ ಮನನ ಶಕ್ತಿಯಿಂದ) ಕೆಟ್ಟ ವಿಚಾರಗಳ್ಳನ್ನ ಸುಟ್ಟು ಕಂಗೊಳಿಸುವಂತವರಾಗಬೇಕು.
ಬೆಂಕಿ ತುಪ್ಪ ಹಾಕಿದರು ಸುಡುತ್ತೆ ಮಲ ಹಾಕಿದರು ಸುಟ್ಟು ಜಿರ್ಣಿಸಿಕೊಳ್ಳತ್ತೆ ಹಾಗೆ ಬಾಳಿನಲ್ಲಿನ ಯೆಶಸ್ಸು, ಅಪಮಾನ, ನಿಂದೆ ಇವನ್ನೆಲ್ಲ ಒಂದೇ ಸಮನಾಗಿ ಜೀರ್ಣಿಸಿಕೊಂಡು ಪ್ರಜ್ವಲಿಸಬೇಕು.
ಕೊನೆಯದಾಗಿ ನಾವು ಬೆಂಕಿಯಸ್ಟೆ ನಿಷ್ಟೂರರಾಗಿರಬೇಕು, ಅಂದರೆ ಯಾರಾದರೂ ಮುಟ್ಟಿದರೆ ಸುಡುವಂತಿರಬೇಕು (ಜ್ನ್ಯಾದದಲ್ಲಿ ಶ್ರೇಷ್ಠತೆ ಹೊಂದಿ ಅದರ ಪ್ರಖರತೆಗೆ ನಮ್ಮ ಬಗ್ಗೆ ಅನ್ಯತ ಮಾತನಾಡುವವರು ಹೆದರಬೇಕು). ದೂರದಲ್ಲೇ ನಿಂತು ನಮ್ಮ ಜ್ನ್ಯಾನದ ಬೆಳಕಿನ ಉಪಯೋಗ ಪಡಿಬೇಕೇ ಹೊರತು ಹಾಳು ಮಾಡಲು ಬಂದು ಮುಟ್ಟಿದರೆ ಅವರಿಗೆ ಅದರ ಉರಿವಿನ ಅರಿವಾಗುವಂತಿರಬೇಕು.
 - ಶರ

Sunday, March 18, 2018

ಬರಹಗಳು


Onsite ಮಂದಿಗಳ ಯಕ್ಷಪ್ರಶ್ನೆ (ಇದರಲ್ಲಿ ನಾನು ಬಾಗಿ) :
ಹೊರದೇಶಗಳಲ್ಲಿ (ಅದರಲ್ಲೂ ಕೋಲ್ಡ್ ದೇಶಗಳಲ್ಲಿ) ಇರುವವರು ತಿಂಗಳಾನುಗಟ್ಟಳೆ ಚಳಿಯ ಬದುಕು, ಭಾರತದಲ್ಲಿನ ವಿಟಮಿನ್ D ಗೆ ಪೂರಕವಾದ ಇ ದೇಹಕ್ಕೆ ಅದರ ಕೊರತೆಯಿಂದ ಬರುವ health challenges, ಹಬ್ಬ ಹರಿದಿನಗಳಿಗೆ ಸಂಭ್ರಮಿಸಲು ಇಲ್ಲದ ಅಪ್ಪ, ಅಮ್ಮ, ಮತ್ತು ಬಂದು ಬಾಂಧವರು, ಇಷ್ಟರ ಮೇಲು ಜಾಬ್ ಮಾರ್ಕೆಟ್ ಕ್ರ್ಯಾಶ್ ಆಗಿ ಅಲ್ಲಿನ ಜನಾನೇ  ನಮ್ಮ  ದೇಶ ಬಿಟ್ಟು ಹೋಗಿ ಅಂದ್ರೂನೂ, ನಾವು ಸ್ನೇಹಿತರ ಮನೆಯಲ್ಲಿ ಸೇರಿದಾಗಲೆಲ್ಲ ಮೂರು ಗಂಟೆಯಲ್ಲಿ ಒಂದು ಗಂಟೆ ಬರೀ ಭಾರತಕ್ಕೆ ಹೋಗಬೇಕಾ ಬೇಡ್ವಾ ಇದೇ ಡಿಸ್ಕಶನ್ಸ್, ಆಮೇಲೆ ನಾವು ಮಾಡ್ಕೊಂಡಿರೋ ಕನ್ನಡ ಬಳಗಗಳು ಸೇರಿದಾಗಲೂ ಇದೆ ವಿಷಯದ ಬಗ್ಗೆ ಶೃಂಗಸಭೆಗಳೇ ನಡೆದು ಹೋಗ್ತಾವೆ. ಕೊನೆಗೆ ಮಿನಿಮಮ್  ಮೂರರಿಂದ ಐದು ವರ್ಷ ಆದರು ಇ  ಯಕ್ಷಪ್ರಶ್ನೆಗೆ ಉತ್ತರ ಸಿಗದೆ  ಬಹಿರಂಗದಲ್ಲಿ ನಗುತ್ತಾ, ಅಂತರಂಗದಲ್ಲಿ ನಿರಂತರ ಆತ್ಮಾವಲೋಕನ ಮಾಡ್ಕೋತಾ ಇರ್ತಿವಿ.
ಇದೇ ಸ್ವಯಂ ನಾವು ರಜಕ್ಕೆ ಭಾರತಕ್ಕೆ ಬಂದಾಗ ಒಂದು ದಿನ ಸಂಬಂದಿಕರ ಮನೆಗೆ ಕೆಂಗೇರಿಯಿಂದ  KR ಪುರಂ ಗೆ ಅದು ಟ್ಯಾಕ್ಸಿಲಿ ಹೋಗಿ, ಅವತ್ತು ಸಂಜೇನೇ O My God, ಈ ಟ್ರಾಫಿಕ್ , ಈ ಧೂಳು ಬೇಡಪ್ಪಾ, ಇಟ್ಸ್ ವೆರಿ HOT ಅಂತ ಸುಂಸುಮ್ನೆ ಕಾರಣ ಹುಟ್ಟುಸ್ಕೊಂಡು easy ಯಾಗಿ ಭಾರತ ಬಿಟ್ಟು ವಾಪಾಸ್ ಹೋಗುವ  Decision ತಗೋತೀವಿ (ಅದು ವಿಥೌಟ್ ಡಿಸ್ಕಶನ್ ಮತ್ತೆ ವಿಥೌಟ್ ಡೌಟ್).
Somewhere ನಂಗೆ ಅನ್ಸುತ್ತೆ ಇ ಭಾರತ ಬಿಟ್ಟು ಹೋಗೋ decision ತಗೋವಾಗ ನಮ್ಮ ಮೈಮೇಲೆ ಕೆಲವು ದೇವತೆಗಳು ಬಂದು ಸಹಾಯ ಮಾಡುತ್ತವೆ ಅಂತ. ಆ ದೇವತೆ ಗಳು ಡಾಲರಮ್ಮ , ಪೌಂಡಾಂಬೆ, ಯೂರೇಶ್ವರಿ ಹೀಗೆ ಮತ್ತು ಹಲವು ದೇಶದ ಲಕ್ಷ್ಮಿಯರು.......:)
ಸೂಚನೆ : ಇದು ನನ್ನ ಸ್ವಂತ ಅಭಿಪ್ರಾಯ, ಯಾರಿಗಾದರು  ಇರುಸುಮುರಿಸಾದರೆ ಇದನ್ನ ಒಂದು ಹಾಸ್ಯ ಬರಹದ ರೂಪದಲ್ಲಿ ಓದಿ. ಕೊನೆಗೆ ಒಂದು ಮಾತು ಬರಿಲೇಬೇಕು ನಮ್ಮ ಭಾರತ ಕರ್ಮಭೂಮಿ (ಅಂದರೆ ಶ್ರೇಷ್ಠಸಾಧನೆಗೆ ಸಾಕಾರವಾಗುವ ನಾಡು) ಇನ್ನೆಲ್ಲ ಭೋಗಭೂಮಿಗಳು ಅಂತ ಕೇಳಿದ ನೆನಪು - ಶರ.

--------------------------------------------------------------------------------------------------------------------------

ಈಗಿನ ರಾಜಕೀಯ ವ್ಯವಸ್ಥೆಯಲ್ಲಿ ಬಹುತೇಕರು ಒಂದು ಬಾರಿ  MLA ಅಥವಾ MP ಆದರೆ ಕಡಿಮೆ ಅಂದರೂ  ಆತನ ಮೂರು ತಲೆಮಾರಿನ ಮಕ್ಕಳು ಅಥವಾ ಬಂದುಬಾಂದವರು ಆ ಅಧಿಕಾರದ ಚುಕ್ಕಾಣಿ ಹಿಡಿದು ಕೂತುಬಿಡುತ್ತಾರೆ. ಇವ್ರೆಲ್ಲ ಸೇರಿ ಇನ್ನು ಆರು ತಲೆಮಾರು ಕೂತು ತಿನ್ನುವಷ್ಟು ಮಾಡಿ ಮಣ್ಣಾಗಿ ಹೊಗ್ತಾರೆ. ಆದರೆ ಒಂದು ವಿಷ್ಯ ತಿಳಿದಿರಲಿ ಯೋಗ್ಯರಲ್ಲದ ಮಕ್ಕಳಿಗೆ ಅಧಿಕಾರ ಕೊಟ್ಟರೆ ಅವರ ಪಾಪ ಕರ್ಮದಲ್ಲಿ ನಿಮಗೂ ಕಟ್ಟಿಟ್ಟ ಪಾಲು ಇರುತ್ತದೆ. ಇಂತವರೆಲ್ಲ ನಮ್ಮ ಭವ್ಯ ಭಾರತದ ಇತಿಹಾಸ ಸ್ವಲ್ಪ ತಿರುಗಿ ನೋಡಿದ್ರೆ ಎಂತಾ ಉದಾಹರಣೆ ಸಿಗುತ್ತೆ ಗೊತ್ತಾ?
ಇತಿಹಾಸ ಪುಟಗಳಲ್ಲಿ : ದುಷ್ಯಂತ ಮತ್ತು ಶಾಕುಂತಲೆಯ ಪುತ್ರ ಭರತ ಚಕ್ರವರ್ತಿ (ಇವರಿಂದಾನೆ ನಮ್ಮ ದೇಶ ಭಾರತ ಅಂತ ಹೆಸರು ಪಡೆದದ್ದು) ಯುವರಾಜನನ್ನು ಘೋಷಿಸಬೇಕು ಅನ್ನುವ ಸಂದರ್ಭ ಬಂದಾಗ ತನ್ನ ಒಂಬತ್ತು ಜನ ಮಕ್ಕಳಲ್ಲಿ ಯಾರಲ್ಲೂ ರಾಜ್ಯವಾಳುವ ಯೋಗ್ಯತೆ ಕಂಡುಬರದಿದ್ದಾಗ ತನ್ನ ಮಂತ್ರಿಯ ಮಗನನ್ನು ಯುವರಾಜ ಅಂತ ಘೋಷಿಸುತ್ತಾನೆ. ಅವ್ನು ಹೇಳ್ತಾನೆ ಅಧಿಕಾರ ಅನ್ನೋದು ಕರ್ಮದಿಂದ(ಗುಣಶ್ರೇಷ್ಠತೆ) ಪಡೀಬೇಕು ಹೊರತು ಜನ್ಮದಿಂದಲ್ಲ(ಮಗನಾಗಿ ಹುಟ್ಟಿದ್ದಷ್ಟೇ ಅರ್ಹತೆಯಲ್ಲ) ಅಂತ. 
ಹೀಗೆ ಒಬ್ಬ ವ್ಯಕ್ತಿ ಒಳ್ಳೆ ಗುರಿಯಿಂದ ಒಂದು ಫ್ಯಾಕ್ಟರಿ ಕಟ್ಟುತಾನೆ ನೂರಾರು ಜನಕ್ಕೆ ಜೀವನ ಕೊಡ್ತಾನೆ ಆದ್ರೆ ಅವನ ಮಗ ಅರ್ಹನಲ್ಲದಿದ್ರೂ ಪುತ್ರವ್ಯಾಮೋಹಕ್ಕೆ ಸಿಕ್ಕಿ ಅಧಿಕಾರ ಕೊಟ್ರೆ ಮೂರು ವರ್ಷದಲ್ಲೇ ಅದನ್ನು  ಮಾರಿ ಕೆಲಸಗಾರರ ಬದುಕಿಗೆ ಕಂಟಕವಾಗ್ತಾನೆ ಆ ಪಾಪ ಕರ್ಮದ ಫಲ ತಂದೆಯಾದಿಯಾಗಿ ಪೂರ್ವಜರಿಗೂ ಸೇರುತ್ತೆ ಹಾಗು ಅವರು  ಗಳಿಸಿದ ಪುಣ್ಯವೂ ಗ್ರಾಸವಾಗುತ್ತೆ.
ಹೀಗೆ ರಾಜಕೀಯದಲ್ಲಂತೂ ಇದು ಇನ್ನೂ ಅಪಾಯಾಕಾರಿ ಆದರೆ ಇಂತ ನೀತಿ ಪಾಲಿಸೋ ಕಾಲಘಟ್ಟ  ಮೀರಿ ದಶಕಗಳೇ ಆಗಿದೆ. ಆದರೂ ವಿಷ್ಯ ತಿಳ್ಕೊಳೋದ್ರಲ್ಲಿ ತಪ್ಪಿಲ್ಲ. ಪಾಲಿಸೋದು ಬಿಡೋದು ಅವರವರ ಇಚ್ಛೆಗೆ ಬಿಟ್ಟದ್ದು. - ಶರ
-------------------------------------------------------------------------------------------------------------------------

ನಾನ್ಯಾರು? : ಪ್ರತಿಯೊಂದು ಜಾತಿ, ಮತ ಮತ್ತು ಧರ್ಮಗಳ ಜನರು  ಅವರವರ ತತ್ವ ಸಿದ್ಧಾಂತದ ಮೇಲೆ ಆಯಾ ತತ್ವ ಅನುಸರಿಸಿ ಮೋಕ್ಷ ಅಥವಾ ಜೀವಾತ್ಮನ ಸಾಧನೆಯ ಉತ್ತುಂಗವೇರಿದ  ಗುರುಗಳ ಹಾದಿ ಹಿಡಿದು ಹೊರಟಿರುತ್ತಾರೆ. ದಾರಿಗಳು ಹಲವು ಆದರೆ ಎಲ್ಲರ ಸಾಧನೆಯ ಗುರಿ ಒಂದೆ.
ಹೀಗಿರುವಾಗ ಈ ರಾಕ್ಷಸಪ್ರವೃತ್ತಿಯ ರಾಜಕಾರಣಿಗಳು ವೇಷ ಬದಲಿಸಿ ಆಯಾ ಗುಂಪುಗಳಲ್ಲಿ ಅವರಂತೆ ಬೆರೆಯುತ್ತಾರೆ. ರಾಕ್ಷಸ ಜಾತಿಗೆ ಗುಂಪಿನಲ್ಲಿ ಜನರಿಗೆ ಇವರ ಬಳಿ ಇರುವ ವಸ್ತುಗಳನ್ನು ದೋಚಲು  ಅಥವಾ ಇವರನ್ನೇ ಭಕ್ಷಣೆ ಮಾಡಲು ಇವರೆಲ್ಲ ಗುಂಪಿನಲ್ಲಿದ್ದರೆ  ಕಷ್ಟಸಾಧ್ಯ. ಅದಕ್ಕೆ ಆದಷ್ಟು ಗುಂಪನ್ನು ದಾರಿತಪ್ಪಿಸಿ, ಗುರಿಯಿಂದ ದೃಷ್ಟಿ ಮರೆಸಿ, ರಟ್ಟೆ ಬಲ ಹಾಗು ಬುದ್ಧಿಶ್ಯಕ್ತಿಯ ಸಾಮರ್ಥ್ಯಕ್ಕೆ ಮಂಕು ಬಡಿಸಿ,  ಸವಲತ್ತಿನ  ಸೋಗು ಹಾಕಿ, ಇನ್ನೇನು  ಇವರಿಂದ ಏನು ಸಾಧ್ಯವಿಲ್ಲ ಅಂದಾಗ ಅವರಲ್ಲಿರು ವಸ್ತುಗಳನ್ನು ದೋಚುವುದು, ಇಲ್ಲ ಅವರನ್ನೇ ಭಕ್ಷಣೆ ಮಾಡಿ ಅವರ ಕಾರ್ಯ ಸಿದ್ದಿಸಿಕೊಳ್ತಾರೆ.
ನೀನು (ಆಯಾ ಜಾತಿ) ಗುರಿಮುಟ್ಟುವ ದಾರಿಗೆ ಸ್ಟ್ರೀಟ್ ಲೈಟ್ ಹಾಕಿಸ್ತಿನಿ ಸೊ ನೀನು ರಾತ್ರಿನೂ ನಡೆದು ಬೇಗ ಗುರಿಮುಟ್ಟಬಹುದು. ಇಲ್ಲ ದುರುಳರು ಪಕ್ಕದವರ ಹಾಡಿಗೆ ಮುಳ್ಳು ಹಾಕು ಆಗ ಅವರು ಬರುವುದು ತಡವಾದಾಗ ನೀನು ಬೇಗ ಕ್ರಮಿಸಿ ಗುರಿ ಮುಟ್ಟು ಅನ್ನೋ ಕಲಿಪ್ರವೃತ್ತಿ. ಇಲ್ಲ ಒಂದೇ ದಾರೀಲಿ ಹೊರಟ ಗುಂಪಿನಲ್ಲೆ ಆ ನಾಲ್ಕು ಜನ ಹೇಳಿದ್ದು ಈ ದಾರಿಯಲ್ಲಿ ನಡೆದ ಗುರುಗಳ ತತ್ವ ಅಲ್ಲ ಸೊ, ಈ ದಾರಿಯಿಂದ ಕವಲೊಡೆದು ನಮ್ಮದೇ ದಾರಿ ಮಾಡ್ಕೊಳೊಣ ಅಂತ ಒಳಪಂಗಡ ಸೃಷ್ಟಿಸೋದು. ಇಷ್ಟೆಲ್ಲ ಕುಹಕ ಪ್ರಲಾಪದೊಳಗೆ ಮತಿಬ್ರಹ್ಮಣೆ  ಮಾಡಿಸಿ ಗುರು ಸಿದ್ಧಾಂತವನ್ನ ಗೋವಿಂದ  ಅನ್ನಿಸಿ, ಸಾಧನೆಯ  ಹಾದಿಯ ದಾರಿ ತಪ್ಪಿಸುತ್ತಾರೆ. ಇದ್ರಲ್ಲಿ ನಮ್ಮ ಪಾಲು ಸರಿಸಮ ಸ್ವಂತ ಬುದ್ದಿ ಇರದೆ  ಕಂಡವರಿಗೆ ಕೊಟ್ಟು ಬಡುಸ್ಕೊಳ್ಳೊ  ಮಂದಿ ನಾವು, ಮೊದಲು ನಮ್ಮನ ಸರಿ ಮಾಡ್ಕೋಬೇಕು.
ತೃಪ್ತಿಯಾಗಿ  ಬದುಕೋಕ್ಕೆ, ಬೆಳಗ್ಗೆ ಎದ್ದ  ಕೂಡ್ಲೇ ಮೈ ಮುರಿದು, ರಟ್ಟೆ ಸೆಟೆದು ಇಲ್ಲ ಬುದ್ದಿ ಬಳಸಿ ದುಡಿಮೆ ಮಾಡು. ಬಂದಿದ್ದ ದುಡ್ಡಲ್ಲಿ ಹನ್ನೆರಡಾಣೆ ತಿನ್ನು, ನಾಲ್ಕಾಣೆ ಧರ್ಮಕ್ಕೋ, ನಿಶ್ಶಕ್ತರಿಗೋ, ಧರ್ಮಕ್ಕೊ  ಇಲ್ಲ ವಿದ್ಯಾಭ್ಯಾಸಕ್ಕೋ ವ್ಯಯಿಸು. ಪ್ರೀತಿ ಕೊಡು ಪ್ರೀತಿ ಪಡಿ. ಕೊನೆಗೆ ಬಿಸಿ ಅನ್ನದ್ ಜೊತೆ ತಿಳಿ ಸಾರು ಹಾಕ್ಕೊಂಡು ಉಂಡು, ಮಂದವಾದ ಮಜ್ಜಿಗೆಗೆ ಹದವಾಗಿ ವಗ್ಗರಣೆ ಹಾಕಿ ತಣ್ಣಗೆ ಕುಡಿದು ಮಲ್ಕೊ...ಇದಕಿಂತ  ಲೈಫ್ ಬೇಕಾ....ಹಹಹಹಹಹಾ - ಶರ
--------------------------------------------------------------------------------------------------------------------------

ಮನಮುಟ್ಟುವ ಸನ್ನಿವೇಶ ಮತ್ತು ನೀತಿಪಾಠ : ಕುರುಕ್ಷೇತ್ರದ ಹದಿನೇಳನೇ ದಿನದ ಯುದ್ಧ ನಡೆದಿರತ್ತೆ, ಇನ್ನೂ  ಕರ್ಣನನ್ನ ಕೊಲ್ಲದ ಅರ್ಜುನನನಿಗೆ ಯುಧಿಷ್ಠಿರ ಸಿಟ್ಟಿನಿಂದ ಹೇಳ್ತಾನೆ, ಅರ್ಜುನ ನಿನ್ನ ಗಾಂಡೀವ ಬಿಸಾಕಿಬಿಡು ಯಾಕೆ ಬೇಕು ನಿನಗೆ ಅಂತ. ಆಗ ಅರ್ಜುನ ಖಡ್ಗ ತಗೆದು ಯುಧಿಷ್ಠಿರನ್ನ ಕೊಲ್ಲಕ್ಕೆ ಹೋಗ್ತಾನೆ. ಅಲ್ಲೇ ಇದ್ದ ಕೃಷ್ಣ ಕೇಳ್ತಾನೆ, ಯಾಕಪ್ಪ ಹಿಂಗೆ ಮಾಡ್ತಾ ಇದ್ದೀಯ ಅಂತ. ಆಗ ಅರ್ಜುನ ಹೇಳ್ತಾನೆ,  ನಾನು ನನ್ನ ಗಾಂಡೀವಕ್ಕೆ ಅಪಮಾನ ಮಾಡಿದವರನ್ನ ಕೊಲ್ಲುತ್ತೇನೆ ಅಂತ ಶಪಥ ಮಾಡಿದಿನಿ ಅದಕ್ಕೆ ಅಂತಾನೆ.
ಆಗ ಕೃಷ್ಣ ಹೇಳ್ತಾನೆ, ಅಷ್ಟೆ ತಾನೆ ಹಾಗಿದ್ರೆ ನಿನಗೆ ಹಿರಿಯನಾದ ಯುಧಿಷ್ಟರನ್ನ  ಮನಸೋ ಇಚ್ಛೆ ಬೈದು ಬಿಡು, ಅದು ಅವನನ್ನು ಕೊಂದಹಾಗೆ ಆಗುತ್ತೆ ಅಂತ. ಅರ್ಜುನ ಎಲ್ಲ ಹಳೆಯ ಸಿಟ್ಟನ್ನೆಲ್ಲ ಒಟ್ಟುಗೂಡಿಸಿ ಸರಿಯಾಗಿ ಅವಹೇಳನ ಮಾಡಿಬಿಡ್ತಾನೆ. ಅದರ ನಂತರ, ಅವನು ಚೂರಿ ತೆಗೆದು ಆತ್ಮಹತ್ಯೆ ಮಾಡ್ಕೊಳಕ್ಕೆ ಹೋಗ್ತಾನೆ, ಆಗ ಕೃಷ್ಣ ಕೇಳ್ತಾನೆ ಈಗೇನಾಯ್ತೋ ಮಾರಾಯ ಅಂತ, ಅರ್ಜುನ ಹೇಳ್ತಾನೆ ಹಿರಿಯರನ್ನು ಬೈದಮೇಲೆ ನಾನು ಅವ್ರಿಗೆ ಮುಖ ತೋರಿಸ್ಕೊಂಡು ಬದುಕೋದು ಹೇಗೆ, ಅದರ ಬದಲು ಸಾವೇ ಶ್ರೇಷ್ಠ ಅಂತ ಸಾಯ್ತಿದಿನಿ ಅಂತ. ಕೃಷ್ಣ ಹೇಳ್ತಾನೆ ಇದಕ್ಕೂ ಉಪಾಯ ಇದೆ, ಇವಾಗ ನೀನು ನಿನ್ನನ್ನೇ ಚೆನ್ನಾಗಿ ಹೊಗಳಿಕೊ, ಅದು ನಿನ್ನ ಆತ್ಮಹತ್ಯೆ ಮಾಡಿಕೊಂಡ ಹಾಗೆ ಅಂತ ಹೇಳ್ತಾನೆ.
ತಾತ್ಪರ್ಯ : ದಿನಬೆಳಗಾದ್ರೆ, ಹಿರಿಯರ ವಯಸ್ಸಿನ ಅರಿವಿಲ್ಲದೆ, ಹಿರಿಯರ ಜ್ನ್ಯಾನದ ಬಗೆಗಿನ ತಿಳುವಳಿಕೆಯಿಲ್ಲದೆ ಬೈತಾ ಇರ್ತೇವೆ, ನಾವು  ಎಷ್ಟು ಕೊಲೆ ಮಾಡಿದ ಪಾಪದ  ಮೂಟೆ  ಹೊತ್ತಿದ್ದೇವೋ ಗೊತ್ತಿಲ್ಲ .. ಆಮೇಲೆ ನಾಲ್ಕಾಣೆ ಸಹಾಯ ಮಾಡಿ ನನ್ನಿಂದಲೇ ಅವನ ಜೀವನ ಉದ್ದಾರ ಆಯಿತು ಅಂತ ಹೇಳ್ಕೊಂಡು ಒಡಾಡ್ತಿವಿ, ಇದ್ರಿಂದ ನಮ್ಮ ಆತ್ಮಹತ್ಯೆ ಎಷ್ಟು ಮಾಡ್ಕೋತೀವೋ ಅರಿವಿಲ್ಲ. ಇಲ್ಲಿ ನಿಜವಾಗಲೂ ನಮ್ಮ  ಆತ್ಮಾವಲೋಕನ ಅತ್ಯಗತ್ಯ. - ಶರ 

ಜೋಕುಗಳು

ಹಳೇ ಗಾದೆ : ಕೈ ಕೆಸರಾದರೆ ಬಾಯಿಗೆ ಮೊಸರು 
IT ಗಾದೆ : ಕೈಗೆ ಮೌಸ್ ಸಿಕ್ಕಿದ್ರೆ (ಕೆಲಸ ಸಿಕ್ರೆ) ಬಾಯಿಗೆ ಮ್ಯಾಕ್ ಡಿ, ಕೆಎಫ್ಸಿ, ಪಿಜ್ಜಾ ಬರ್ಗರ್ರು 

-------------------------------------------------------------------------------------------------------------------------------------------




ಕಥೆಗಳು


ಒಂದು ಸಲಿ ಒಬ್ಬ ಬ್ರಾಹ್ಮಣ ಸಂಚರಿಸುವಾಗ ರಾತ್ರಿ ಆಗಿರತ್ತೆ ಅವನು ಅಲ್ಲೇ ಒಂದು ಹಳ್ಳಿಯ ಮನೆಗೆ ಹೋಗಿ ಉಳಿಲಿಕ್ಕೆ ಜಾಗ ಕೇಳ್ತಾನೆ. ಆ ಮನೆಯ ಯಜಮಾನ ತುಂಬಾ ಖುಷಿಯಿಂದ ಅವ್ರಿಗೆ ಭೋಜನದ ವ್ಯವಸ್ಥೆ ಮಾಡಿ ಮಲಗೋ ಮೊದಲು ಅವನ ಮನೇಲಿದ್ದ ಹಸುವಿನ ರುಚಿಯಾದ ಹಾಲು ಕೊಡ್ತಾನೆ. ಅದನ್ನು ಕುಡಿದು ಮಲಗಿದ ಬ್ರಾಹ್ಮಣ ರಾತ್ರಿ ಈ ಹಾಲು ಎಷ್ಟು ರುಚಿಯಾಗಿದೆ ಈ ಹಸು ನನಗೆ ಬೇಕು ಅಂತ ಅನ್ನಿಸಿ ಬೆಳಗಾಗುವುದರೊಳಗೆ ಅದನ್ನ ಅಪಹರಿಸಿ ಎದ್ದು ಹೋಗಿಬಿಡುತ್ತಾನೆ.
ಬೆಳಗ್ಗೆ ಎದ್ದ ಮೇಲೆ ಆ ಯಜಮಾನ ಹಸು ಇಲ್ಲದ್ದು ನೋಡಿ, ಅಯ್ಯೋ ನಾನೇ ಬ್ರಾಹ್ಮಣನ ಅವಶ್ಯಕತೆ ಅರಿತು ದಾನ ಮಾಡಿಬಿಡಬೇಕಿತ್ತು...ಇರಲಿ ಅವ್ರನ್ನ ಹುಡುಕಿಕೊಂಡು ಹೋಗಿ ಸಿಕ್ಕರೆ ಅಲ್ಲೇ ದಾನ ಮಾಡಿ ಬಿಡೋಣ ಅಂತ ಹೊರಡುತ್ತಾನೆ. ದಾರೀಲಿ ಹೋಗುತ್ತಾ ಇದ್ದ ಬ್ರಾಹ್ಮಣ ಅಯ್ಯೋ ಎಂಥ ತಪ್ಪು ಮಾಡಿದೆ ಅನ್ನಿಸಿ ಹಸುವನ್ನು ವಾಪಸ್ ಕೊಡೋಣ ಅಂತ ಬರ್ತಾನೆ. ಇಬ್ಬರು ದಾರಿ ಮದ್ಯದಲ್ಲಿ ಸಿಕ್ಕಾಗ ಬ್ಬ್ರಾಹ್ಮಣ ಹಸು ಕೊಟ್ಟು ಕೇಳ್ತಾನೆ ನಂಗೆ ಎಂದು ಬರದ ಕಳುವು ಮಾಡೋ ಬುದ್ದಿ ಯಾಕೆ ಬಂತು ಅಂತ. ಆಗ ಕೇಳ್ತಾನೆ ರಾತ್ರಿ ನನಗೆ ಕೊಟ್ಟ ಊಟ ನಿನ್ನ ಮನೆಯದ್ದ ಅಂತ. ಆಗ ಯಜಮಾನ ಹೇಳ್ತಾನೆ, ಇಲ್ಲ ನಮ್ಮ ಮನೆಯಲ್ಲಿ ಎಲ್ಲ ಅಡುಗೆಯ ಪದಾರ್ಥ  ಖಾಲಿಯಾಗಿತ್ತು ನನ್ನ ಪಕ್ಕದ ಮನೆಯವರ ಬಳಿ ತಂದು ಅಡುಗೆ ಮಾಡಿದ ಪದಾರ್ಥ ಅಂತಾನೆ. ಆಗ ಆತನ ಪಕ್ಕದ ಮನೆಯವನು ಎಲ್ಲಿಂದ ದುಡಿದು ತಂದ ಪದಾರ್ಥ ಅಂತ ಹಿನ್ನಲೆ ಹುಡುಕಿದಾಗ ಗೊತ್ತಾಗತ್ತೆ ಅದು ಅಧರ್ಮ ಮತ್ತು ಕಳ್ಳತನದಿಂದ ದುಡಿದು ತಂಡ ಪದಾರ್ಥ ಅಂತ. ಅದನ್ನು ಉಂಡ ಬ್ರಾಹ್ಮಣನ  ಬುದ್ದೀಲಿ  ಎಂದೂ  ಬರದ ಕಳ್ಳತನದ ಬುದ್ದಿ ಬಂದಿರತ್ತೆ.
ತಾತ್ಪರ್ಯ : ನಾವು  ನಿತ್ಯ ದುಡಿದು ತಿನ್ನುವ ಅನ್ನ ನ್ಯಾಯ ನೀತಿ ಮಾರ್ಗದಲ್ಲದಿದ್ದರೆ, ಅದು ನಮ್ಮ ಮತಿಯ ಹಾಗು ಭವಿಷ್ಯಕ್ಕೆ ಮಾರಕವಾಗೋದು ಖಂಡಿತ.
ಅದಕ್ಕೆ ನಮ್ಮ ಡಿವಿಜಿ ಹೇಳ್ತಾರೆ ಅಣ್ಣ ಉಣುವಾಗ ಕೇಳು ಅದು ನಿನ್ನ ಬೆಮರಿನ ಫಲವೋ ಇಲ್ಲ ಪರರ ಕಣ್ಣೀರೋ ಅಂತ....ಎಷ್ಟೇ ಆದರು ಸ್ವಾಭಿಮಾನದ ಉತ್ತಂಗದಲ್ಲಿ ಬದುಕಿ ಹೋದ ದಾರ್ಶನಿಕರಲ್ಲವೆ. ಜೀವನ ತುಂಬಾ ಮೌಲ್ಯವಾದದ್ದು ಅದನ್ನ ಶ್ರೇಷ್ಠವಾಗಿ ಬದುಕಿ ಸಾರ್ಥಕತೆ ಪಡೀಬೇಕು.  - ಶರ

--------------------------------------------------------------------------------------------------------------------------

ಒಂದು ಸಾರಿ ಕರ್ಣ ದಾನ ಮಾಡುವಾಗ ಎಡಗಡೆ ಇರುವ ಒ೦ದು ಬಿಂದಿಗೆ ತೆಗೆದು ಬ್ರಾಹ್ಮಣರಿಗೆ ದಾನ ಮಾಡ್ತಾನೆ. ಇಸ್ಕೊಂಡ ಮೇಲೆ ಬ್ರಾಹ್ಮಣರು ಆಕ್ಷೆಪನೆ ಮಾಡ್ತಾರೆ, ಅಯ್ಯೊ ಎಡಗೈನಲ್ಲಿ ಕೊಟ್ರಿ ಅಪಚಾರ ಆಯಿತು ಅಂತ. ಆಗ ಕರ್ಣ ಹೆಳ್ತಾನೆ ಅದು ಬಂಗಾರದ ಬಿಂದಿಗೆ ಎಲ್ಲಿ ಎಡ ಕೈ ಇಂದ ಬಲ ಕೈಗೆ ತಗೊಳೊ ಅಸ್ಟರಲ್ಲಿ ಮನಸ್ಸು ಬದಲಾಗಿ ಕೊಡಬೇಡ ಬಂಗಾರದ್ದು ಅನ್ನುತ್ತೊ ಅಂತ ಹಾಗೆ ಕೊಟ್ಟೆ ಅಂತಾನೆ.
ತಾತ್ಫರ್ಯ : ದಾನ ಮಾಡೊ ಇಚ್ಛೆ ಬಂದಾಗ ಬುದ್ದಿಗೆ ಅನಿಸಿದ ಕೂಡಲೆ ಕೈಯಿಂದ ಕಾರ್ಯಗತ ಮಾಡಿಬಿಡಬೇಕು. ವಿಚಾರ ಮನಸ್ಸಿಗೆ ಹೊದ್ರೆ ಮಾನವಸಹಜ ಆಸೆ ಆವರಿಸಿ ಎಲ್ಲವು ನನಗೆ ಇರಲಿ ಅನ್ನಿಸಿಬಿಡತ್ತೆ. - ಶರ
--------------------------------------------------------------------------------------------------------------------------

Saturday, August 9, 2008

ಪ್ರೀತಿಯ ಪನ್ನೀರು


ಮಿಂಚಿನ ವೇಗದ ನೀಲಿ ಕಣ್ಣಂಚಿನಿಂದ ಸೆಳೆದಳು ಅವಳೆನ್ನ….
ಒಂದೊಮ್ಮೆಯಾದರು ಆ ಕಣ್ಣಿನ ಕನಸಲಿ ತೇಲಬಾರದೆ ಎನ್ನ ಮನ…..
ಹೀಗೆ ಬಾವನೆಗಳ ಬ್ರಮೆಯಲ್ಲಿ ತೇಲುತಿರಲು ಬಂದಳವಳು ಎನ್ನ ಬಳಿ.....
ತುಸು ಮಾತಿನ ಪಿಸು ದನಿಯಲಿ.....ಹೇಳಿದಲೊಂದು ನುಡಿಯ.....
ಓ ಗೆಳೆಯ....ಇ ಕಂಗಲೇನೋ ನನ್ನದು.....ಆದರೆ.....
ಇದರಲ್ಲಿ ಸೆರೆಹಿಡಿದ ಬಿಂಬ ಮಾತ್ರ ನಿನ್ನದು ...
ಬಾ ಸೇರಿಸುವ ನೋಟವ ....ನೋಡು ಆಗ ಇ ಪ್ರೆಮಲೋಕವೆಲ್ಲ ನಮ್ಮದು ...
- ಶರ

ಒಲವಿನಾ ಬಲೆಯಲಿ ಸಿಕ್ಕಿ ಬಿದ್ದ ಜೇಡವಾದೆನು
ಪ್ರೀತಿಯೆಂಬ ಮಾಯಾಮ್ರುಗವ ಹಿಡಿಯ ಹೊರಟ ಬೇಡನಾದೆನು
ಸಾಯುವೆನೊ, ಹಿಡಿಯುವೆನೊ ಒಂದೂ ತಿಳಿಯದಾದೆನು
- ಶರ

ಕಳ್ಳ ಮನವು ಏಕೊ ಇಂದು ಬೆಳ್ಳಿ ಮೊಡವಾಗಿದೆ.....
ರೆಪ್ಪೆ ಬಡಿಯುವಸ್ಟರಲ್ಲಿ ಕಡಲ ದಾಟಿ ಸಾಗಿದೆ.....
ಪ್ರೀತಿಯೆಂಬ ಗಾಳಿ ಅದನು ಅವಳ ಊರಿಗೊಯ್ದಿದೆ.....
ಪ್ರೇಮದಿನದ ಬಿಸಿಯು ತಾಕಿ ಮನದ ಮೊಡ ಕರಗಿ ನನ್ನವಳ ಹಾಗೆ ನೆನೆಸಿದೆ !

ಎಷ್ಟು ದೂರವಿದ್ದರೇನು ಗೆಳತಿ, ಕಲ್ಪನೆಯಲೆ ನಿನ್ನ ಮುಟ್ಟುವೆ.....
ಭೂಮಿ, ಬಾನು, ಮೊಡ ಮಳೆಯು ಇರುವಷ್ಟು ಕಾಲ ನೆನೆಯುವೆ.....ನಿನ್ನನ್ನೇ ಸದಾ ಪ್ರೀತಿಸುವೆ.
- ಶರ

ದನಿಯಾದಳು...ದಿನವಾದಳು.....
ದಾರಿ ಮರೆತ ದೀನಮನಕೆ ದೀಪದ ಬೆಳಕಾದಳು.....
ದಿನವ ದೊಚಿ...ಮನವ ಮಣಿಸಿ...ದಿಗಂತವೇರಿ ಹೋದಳು.....
ದ್ರುವತಾರೆಯ ಗುಂಪು ಸೇರಿ ಮಿನುಗುತಾರೆಯದಳು.....
ದನಿಯಾದಳು.....ದಿನವಾದಳು.....ಬದುಕಿಸಿ ನನ್ನ.....ಬರಿಯ ನೆನಪಾದಳು.....
- ಶರ

ಮೊದ ಮೊದಲು ಮೊಟ್ಟಮೊದಲು
ನನ್ನೊಳಗೆ ನಾನಗಿದ್ದೆ ನಾನು
ನಿನ್ನೊಳಗೆ ನೀನಾಗಿದ್ದೆ ನೀನು

ನಿನ್ನ ನೋಡಿದ ಮೊದಲ ನೋಟದಿ
ನನ್ನ ದೃಷ್ಟಿ ನಿನ್ನದಾಯ್ತು
ನನಗೆ ತಿಳಿಯದೇನೆ
ನನ್ನಮನಸು ತೇಲಿ ಹಾರೊಯ್ತು
ಅದು ನಿನ್ನ ಮನಸ ಸೇರಿತ್ತು .

ನಡು ನಡುವೆ ನಟ್ಟನಡುವೆ
ನನ್ನನೆ ನಾ ಮರೆತೆ
ನಿನ್ನ ಹ್ರುದಯದ ಕದವ ಬಡಿದೆ.

ನನ್ನ ಮನಸಿನ ಅಂದಚೆಂದಕೆ
ನಿನ್ನ ಮನಸು ಬೆರಗಾಯ್ತು
ಮಿನುಮಿನುಗೋ ಕೆಂಪು ತುಟಿಯಲಿ
ಪ್ರೀತಿ ಮಾತು ಬಂದಾಯ್ತು
ಅತ್ತ ಇತ್ತ ನೋಡದೆ ಮನಸುಗಳು ಬದಲಾಯ್ತು

ಕೊನೆ ಕೊನೆಗೆ ಕಟ್ಟಕಡೆಗೆ
ನಾನು, ನೀನು ನಾವಾದೆವು
ಬೆಳ್ಳಿ ಮೋಡದಲ್ಲಿ ಹಾರಿ ತೇಲಿ ಹಾಡಾದೆವು .
- ಶರ

ಬಾವನೆಯ ಬೆನ್ನೇರಿ

ಬಾವನೆಗಳ ಬೆಸೆಯುವುದಕೆ ಭಾಷೆ ಒಂದು ಸಾಧನ...
ಭಾಷೆಯ ಹಿರಿಮೆ ಅರಿತು ಬಾಳೆ, ಅದುವೇ ಸಾರ್ಥಕತೆಯ ಜೀವನ...

ಜೀವನ ಸಾರ ತಿಳಿದು ಹೇಳೊ ಕನ್ನಡದೊತ್ತಿಗೆಗಳ ಓಧುವ...
ಅದರ ತಿರುಳ ಅರಿತು ನಡೆದು ಬಾಳಿಗೊಂದು ಅರ್ಥ ನೀಡುವ...

ಜಾನಪದದ ಜಾಡಿನಲ್ಲಿ ಸಂಸ್ಕೃತಿಯ ತಿಳಿದು ನಡೆಯುವ...
ಹುಟ್ಟಿ ಬಂದ ಹಳ್ಳಿಗಳಿಗೆ ಸೇವೆಯ ಹಸ್ತ ಸದಾ ಚಾಚುವ...

ಇರುವ ತನಕ ನಾಡು ನುಡಿ ಸೇವೆಗಾಗಿ ಬಾಳುವ...
ಸತ್ತ ಮೇಲೂ ಸ್ವರ್ಗದಲ್ಲಿ ನಾಡಹಬ್ಬ ಮಾಡಿ ಮೆರೆಯುವ...

- ಶರ

ಓ ಸಾವೇ, ಬಾರದಿರು ನೀ ಪ್ರೀತಿಸಿ ಪೊರೆವ ಸಂಬಂದಗಳಲಿ,
ಬಾರದಿರು ನೀ ಜಗವ ಕಾಣದ ಹಸು ಕಂದಮ್ಮಗಳಲಿ,
ಕಾನದಿರು ನೀ ಪ್ರೀತಿಯ ಅರ್ಥ ತಿಳಿಸಿದ ಪ್ರೇಯಸಿಯಲಿ,
ಬಾರದಿರು ನೀ ದೇವರೆಂದು ತಿಳಿದ ತಂದೆ ತಾಯಿಯರಲ್ಲಿ,
ನೀ ಹುಟ್ಟಿ ಬಾ ಒಮ್ಮೆ ಇ ಪ್ರೀತಿ ತುಂಬಿದ ಜಗದಲ್ಲಿ,
ಆಗ ನಿನಗೂ ಅನಿಸುತ್ತದೆ.....ನನಗೂ ಸಾವು ಬಾರದಿರಲಿ.....ನನಗೂ ಸಾವು ಬಾರದಿರಲಿ.
- ಶರ

ಸದಾ ನಗುತಿರೆ , ಜನರೆನ್ನುವರು ನೀ ಹುಚ್ಚನೆಂದು...
ಒಮ್ಮೊಮ್ಮೆ ಅತ್ತರೂ ಹೇಳುವರು ಅಳುಬುರಕನೆಂದು...
ಅಳದೆಯೂ, ನಗದೆಯೂ ಇದ್ಧರೆ ಅನ್ನುವರು ನೀ ಗುಮ್ಮನೆಂದು... 
ಆವರು ನಕ್ಕಾಗ ನಕ್ಕು, ಅಳುವಾಗ ಅತ್ತು ಆವರಂತೆ ನಡೆದರೆ... 
ಒಪ್ಪುವರು ನೀ ಸರ್ವರೊಳಗುತ್ತಮನೆಂದು...
- ಶರ
ಸೋಲು , ಸೋಲು, ಸೋಲು
ಜೀವನದಲ್ಲಿ ಸೋಲು ಸಹಜ
ಸೋಲನ್ನರಿತು ಅದಮೆಟ್ಟಿ
ಗೆದ್ಧವನೆ ಚಲವಿರುವ ಮನುಜ

ಸೋತಾಗ ನಿನ್ನ ನೋಡಿ ನಗುವವರು ನಾಲ್ವರು
ಹಾಸ್ಯಮಾಡಿ ಹಿಂದೆ ನೂಕುವವರು ಮೂವರು
ನೀ ಯಾತಕು ಬಾರದವನೆನ್ನುವರು ಇರ್ವರು
ಆಧರೆ , ಎಲ್ಲ ಇರುವುದು ನಿನ್ನಲ್ಲೇ ಎನ್ನುವವನೋಬ್ಬನೆ , ಆ ದೇವರು

ಸೋಲಿನ ಕಾರಣ ಹೆಕ್ಕಿ ಹೇಳುವವರೇ ನಿಜವಾದ ಸ್ನೇಹಿತರು
ಅದನು ಮರೆಸಿ ಗೆಲುವ ದಾರಿ ತೊರುವರೆ ನಿನ್ನ ಬಾಂಧವರು
ಅದೆಲ್ಲಕ್ಕಿಂತ ಕರ್ಣಕುಂದಲದಂತೆ ನಿನ್ನಿಂದೆ ಇರುವರು ನಿನ್ನ ತಂದೆತಾಯಿಯರು
ಚಲಬಲದಿ ಗೆದ್ಧಾಗ , ನಕ್ಕವರು ನಿನ್ನ ಹಿಂದೆ ಹೌಹಾರಿ ಬರುವರು

ಸೋಲು , ಸೋಲು, ಸೋಲು
ಜೀವನದಲ್ಲಿ ಸೋಲು ಸಹಜ
ಸೋಲನ್ನರಿತು ಅದಮೆಟ್ಟಿ
ಗೆದ್ಧವನೆ ಚಲವಿರುವ ಮನುಜ
- ಶರ

ಚಿಂತನೆಯ ಚಾವಡಿ

ಕನ್ನಡಿಗರಾದ್ರೆ ಒಂದ್ಸಲ ಓದಿ
How r u mate?.....Wats up buddy?.....How is life?....How u doing?...ಇವೆಲ್ಲಾ ಪರಸ್ಪರ ಕ್ಷೇಮಸಮಾಚಾರಗಳನ್ನ ಕೇಳಿಕೊಳ್ಳುವ ಬಗೆಗಳು. ಅದರಲ್ಲೂ MNC ಗಳಲ್ಲಿ ಕೆಲಸ ಮಾಡುವ ಕನ್ನಡಿಗರ ನಡುವೆ ನಡೆಯುವ ಸಂಭಾಷಣೆಯ ರೀತಿ.
ಗೆಳೆಯರೇ....,
ಏನಪ್ಪಾ ಹೇಗಿದ್ಧಿಯ?.....ಏನ್ ಸಮಾಚಾರ?.....ಹೇಗಿದೆ ಜೀವನ?......ಏನು ವಿಶೇಷ?.....ಅಂತೆಲ್ಲ ಕೇಳುವುದಕ್ಕಿಂತ ಆತ್ಮೀಯತೆ ಇ ಇಂಗ್ಲಿಷ್ ಪದಗಳಲ್ಲಿ ಸಿಗುತ್ತ?.....ಅಥವಾ ಕನ್ನಡದಲ್ಲಿ ಕೆಳೋಕ್ಕೆ ನಮ್ಮಲ್ಲಿನ ಕನ್ನಡಿಗ ಇನ್ನು ಜಾಗ್ರುಥನಾಗದೆ ಮಲಗಿದ್ದಾನೆಯೇ ???ನಾವುಗಳು ಒಂದು ದಿನದಲ್ಲಿ ಹಲವಾರು ಕೆಲಸಕ್ಕೆ ಬಾರದ jokes, forword message ಗಳನ್ನ ಓದುತ್ತೇವೆ, ಇದೇ ರೀತಿ ಎಸ್ಟೋ ಸಮಯ ಹಾಳು ಮಾಡುತ್ತೇವೆ; ಆಧರೆ, ನಮ್ಮಲ್ಲಿ ಇದೂವರೆಗೂ ಒಮ್ಮೆಯಾದರೂ Wikipedia ತೆಗೆದು ಕರ್ನಾಟಕದ ಬಗ್ಗೆ ಓದಿದ್ದೀರಾ? ಬವಿಷಹ ಇದ್ದರೂ, ಅದು ಬೆರಳೆನಿಕೆಯಸ್ತು ಮಾತ್ರ. ಕನ್ನಡಿಗರಾದ ನಮಗೇ ಕನ್ನಡದ ಬಗ್ಗೆ ಪರಿಚಯ ಇಲ್ಲ, ಕನ್ನಡದ ಅಭಿಮಾನ ಎಚ್ಚೆತ್ತುಕೊಂಡಿಲ್ಲ, ಅಂದಮೇಲೆ ಇಂದಿನ ಬೆಂಗಳೂರಿನ ಕನ್ನಡಿಗರ ಸ್ಥಿತಿಗೆ ನಾವು ಕಾರಣೀಬೂತರಾಗುತ್ತೇವೆ. ಎನ್ನಡ...ಎಕ್ಕಡಿಗರುಗಳ ಆರ್ಭಟ ಕಿವಿಗೆ ಬಿದ್ದಾಗ ಮಾತ್ರ ನಮ್ಮಲ್ಲಿನ ಕನ್ನಡಿಗ ಎಚ್ಚೆತ್ತುಕೊಳ್ಳುತ್ತಾನೆ, ಕೋಪಗೋಳ್ಳುತ್ತಾನೆ. ಇದು ಎಷ್ಟು ಸಮಂಜಸ ಅಂತ ನಾವೇ ವಿಮರ್ಶಿಸಿಕೊಳ್ಳಬೇಕು.
ಆದ್ದರಿಂದ ಕನ್ನಡಿಗರಲ್ಲಿ ಪೈಪೋಟಿ ಬಿಡಿ, ಕನ್ನಡಿಗರ ನಡುವೆ ನಮ್ಮ English vacabulory, ಗಣಥೆಯ ಪ್ರದರ್ಶನಗಳನ್ನ ಬದಿಗೊತ್ತಿ, ಪರಸ್ಪರ ಕನ್ನಡದಲ್ಲಿ ಮಾತಾಡಿ. ಹೆಮ್ಮೆಯಿಂದ ನಮ್ಮ ಭಾಷೆಯನ್ನು ಬಳಸಿ, ಕನ್ನಡದಲ್ಲಿ ಯೋಗಕ್ಷೇಮ ವಿಚಾರಿಸಿ, ಸಾದ್ಯವಾದರೆ ಕನ್ನಡ ಸಾಹಿತ್ಯದ ಬಗ್ಗೆ message forword ಮಾಡಿ. ಎ ಕಂಪ್ಯೂಟರ್ ಮುಂದೆ ಕುಳಿತು ನಮ್ಮಿಂದ ಎಷ್ಟು ಕನ್ನಡ ಸೇವೆ ಸಾದ್ಯವೊ, ಅಷ್ಟನ್ನು ಮಾಡುತ್ತೇವೆ ಎಂದು ಕಂಕಣ ತೊಡಿ.
ನನ್ನೊಬ್ಬನಿಂದ ಏನು ಆಗಲ್ಲ ಅಂತ ತಿಳಿಯಬೇಡಿ, ಬದಲಿಗೆ " ನನ್ನೊಬ್ಬನಿಂದಲೇ ಎಲ್ಲಾ ಬದಲಾವಣೆ ಸಾಧ್ಯ " ಎಂದು ಒಂದು ಹೆಜ್ಜೆ ಇಡಿ. ಆಗ ನೋಡಿ ಬದಲಾವಣೆಯ ಗಾಳಿ ಕಳೆದುಹೊದ ಕನ್ನಡಿಗನ ದಿಕ್ಕನ್ನು ಬದಲಿಸಿ ಮತ್ತೆ ತನ್ನ ತಂಪನ್ನು ಹೇಗೆ ಸೂಸುತ್ತದೆ ಎಂದು.
ವರುಷದಲ್ಲಿ ಒಂದು ದಿನ ಮಾತ್ರವಲ್ಲದೆ ( ನವಂಬರ್ ೧ ), ನಮ್ಮಲ್ಲಿ ಇದುವರೆಗೂ ಎದ್ದೇಳದೆ ಮಲಗಿರುವ ಕನ್ನಡಿಗನನ್ನು ಎಬ್ಬಿಸಿ, ಕೊನೆ ಉಸಿರಿರುವವರೆಗೂ ನಿದ್ರಿಸದೆ, ಅಳಿಯುತ್ತಿರುವ ಕನ್ನಡದ ಕೃಷಿ ಮಾಡೋಣ. ಆ ಕೃಷಿಯ ಪಳವನ್ನು ನಾವೆಲ್ಲರೂ ಹಂಚಿ ತಿನ್ನೋಣ, ಹಸಿವು ಎಂದು ಬಂದವರಿಗೂ ಕನ್ನಡದ ಸುಧೆಯನ್ನು ಹಂಚೊಣ, ಹೀಗೆ ಕನ್ನಡ ಭುವನೇಶ್ವರಿಯ ಕಿಂಚಿತ್ತು ಸೇವೆಗೆ ಕೈ ಜೋಡಿಸಿ ನಡೆಯೊಣ.

" ಎಲ್ಲಾದರೂ ಇರು, ಎಂತಾದರು ಇರು, ಎಂದೆಂದಿಗೂ ನೀ ಕನ್ನಡವಾಗಿರು "
- ಶರ

ಹೊಸ ವರುಷದ ಹೊಸ ಚಿಂಥನೆ

ಆಗ ತಾನೆ ನ್ಯೂಸ್ ನಲ್ಲಿ ಮುಕೆಶ್ ಅಂಬಾನಿ ವೆಲ್ತ್ ರೂ. 250000 ಕೋಟಿ ಅಂತ ಹೇಳಿದ್ರು ಅದನ್ನೇ ಯೋಚಿಸ್ತಾ ಹಾಗೆ ಹಾಸಿಗೆ ಮೇಲೆ ಹೊರಳಿದೆ, ಒಳ್ಳೆ ನಿದ್ದೆ ಬಂತು, ಹಾಗೆ ಕನಸಲ್ಲಿ ಅಂಬಾನಿ ಬಂದು ಅವರ ವೆಲ್ತ್ ನ ಶೇ ೧ ಭಾಗವನ್ನ ಅಂದರೆ ರೂ ೨೫೦೦ ಕೋಟಿ ಕೊಟ್ಟು ಹೋದರು, ಆಹಾ ಎಂತ ಕನಸು ನಿಜವಾಗ್ಲು ಅವ್ರ ಫೋಟೋನ ದಿನಾ ಪೂಜೆ ಮಾಡ್ಬೇಕು ಯಾಕಂದ್ರೆ ಇದರಿಂದ ನನ್ನ ಎಲ್ಲಾ ಆಸೆಗಳು ಒಂದೇ ಕ್ಷಣದಲ್ಲಿ ಈಡೇರಿದ್ಧವು, ಅದಕ್ಕೆ!. ಹಾಗೆ ನಿದ್ದೆ ಮುಗಿತು ನಂತರ ನೋಡ್ತಿನಿ ಏನು ಇಲ್ಲ ಕೈಯಲ್ಲಿ, ಮನಸಲ್ಲೇ ಬೈಕೊಂಡೆ ಅಂಬಾನಿಯವರನ್ನ, ಅಸ್ಟೆಲ್ಲ ಇದ್ರು ಶೇ ೧ ಭಾಗ ನಂಗೆ ಕೊಡಕ್ಕೆ ಏನು ಅಂತ, ಅದರಿಂದ ನಂಗೆ ಅವ್ರು ಎಸ್ಟು ಕುಶಿ ಕೊಡಬಹುದಿತ್ತು ಅಂತ.
ಆದ್ರೆ ಒಂದು ಕ್ಷಣ ಹಾಗೆ ಯೋಚನೆಯ ಆಳಕ್ಕೆ ಇಳಿದು ನೋಡಿದರೆ, ನನಗೆ ಗೊತ್ತಿಲ್ಲದ ನಾನೇ ಆ ಸಂತೋಷವನ್ನ ಬೇರೆಯವಿರಿಗೆ ಕೊಡುವಸ್ಟು ಬೆಳೆದಿದ್ದೇನೆ ಅಂತ ಅನ್ನುಸ್ತು!
ಅಹುದು ಗೆಳೆಯರೇ..,
ನಾವೆಲ್ಲರೂ ಇವಾಗ ಆ ಸ್ಥಾನದಲ್ಲಿ ಇದ್ಧೇವೆ, ನಾನು ವರ್ಷಕ್ಕೆ ಅಂದಾಜು ೫ ಲಕ್ಷ ದುಡಿದರೆ ಅದರ ಶೇ ೧ ಭಾಗ ಅಂದ್ರೆ ೫ ಸಾವಿರ ಆಯ್ತು, ಆದರೆ ಇಸ್ಟು ದುಡ್ಡು ನಮಗೆ ಏನೋ ಅಲ್ಲ, ವರುಷಗಳಲ್ಲಿ ಬಂದು ಹೋಗೋ ಹಲವಾರು ಪಾರ್ಟಿಗಳಲ್ಲಿ ಒಂದು ಪಾರ್ಟಿಗೆ ಕರ್ಚು ಮಾಡೋ ಹಣ. ಅದರೆ, ಈ ಹಣ ಒಬ್ಬ ಸಾಮಾನ್ಯ ರೈತನ ಒಂದು ವರ್ಷದ ದುಡಿಮೆ, ಇಂದಿಗೂ ಕೂಡ ಅವರ ದುಡಿಮೆ ಇಸ್ಟೆ, ವರ್ಷಕ್ಕೆ ನಮಗೆ ಹಲವು ಬಾರಿ ಹೈಕ್/ಬೋನಸ್ ಸಿಗುತ್ತವೆ, ಆದರೆ ವರ್ಷಕ್ಕೊಮ್ಮೆ ಬಂದು ಹೋಗೋ ಮಳೆ ಏನಾದರು ಕೈ ಕೊಟ್ಟರೆ ಇದರಿಂದ ಇವರ ಪಾಡು ಕಣ್ಣಿರಲ್ಲಿ ಕೈ ತೋಲ್ಯೋದೆ, ಇವೆಲ್ಲರ ನಡುವೇ ಅವರು ಅವರ ಮಕ್ಕಳನ್ನ ಓದ್ಹಿಸೊದು ಹೇಗೆ? ಎಸ್ಟು ಕಸ್ಟ ಇದೆ , ಇಧರಿಂದ ವಿಧ್ಯಾವಂತ ಬಾಲಕರು ಫೀಸ್ ಕಟ್ಟಲಾಗದೆ ತಮ್ಮ ಭವಿಷ್ಯವನ್ನ ಕೂಲಿಗೆ ಮೀಸಲಿಡ್ತಾರೆ, ಯಾಕೆ ನಮಗೆ ಇದೆಲ್ಲ ಗೊತ್ತಾಗ್ತಿಲ್ಲ? ಯಾಕೆ ನಾವು ನಮ್ಮ ಸುಕದ ಗುಂಗಿನಲ್ಲೇ ಮುಳುಗಿ ಹೋಗಿದ್ದೆವೆ? ತಿಂಗಳಿಗೊಂದು ಮೊಬೈಲ್, ಹೊಸ ಹೊಸ ಮಾಡೆಲ್ ನ ಗಾಡಿಗಳು ಇದೇನ ಜೀವನದ ಗುರಿ? ನಾವೆಲ್ಲ ಇ ದಿನ ಪಲ ಕೊಡುವ ಮರಗಳಾಗಿ ಬೆಳೆದಿದ್ದರೆ, ಎಲ್ಲೋ ಒಂದು ಕಡೆ ನಮ್ಮ ಬೇರು ಹುಟ್ಟಿದ್ದು ಈ ಬಡ ಹಳ್ಳಿಗಳಲ್ಲ್ಲಿಯೇ ಅಂತ ಮರೀಬಾರದು, ಬೇರಿಗೆ ನೀರೆರೆದವರನ್ನ ಮರೆತು ಹಣ್ಣನ್ನು ಸ್ವಾರ್ಥಕ್ಕೆ ಮಾರಿಕೊಲ್ಲಭಾರದು ಅಂಥ ನನ್ನ ನಿಲುವು.
ಇಸ್ಟೆಲ್ಲ ಪೀಠಿಕೆ ಹಾಕಿ ನಾನು ಹೇಳಬಯಸುವ ಮಾತು ಇಸ್ಟೇ........ನಮ್ಮ ಒಂದು ವರುಷದ ಆದಾಯದ ಶೇ ೧ ಬಾಗವನ್ನ ನಾವು ತೆಗೆದಿಟ್ಟು, ಆ ಹಣದಿಂದ ನಮ್ಮ ಹಳ್ಳಿಗಳಿಗೆ ಹೋಗಿ ಚೆನ್ನಾಗಿ ಓದುವ ವಿಧ್ಯಾರ್ಥಿಗಳಿಗೆ ಬಹುಮಾನವಾಗಿ ಕೊಟ್ರೆ, ನಿಜವಾಗ್ಲೂ ಹಣದ ಅವಶ್ಯಕತೆ ಇರುವವರಿಗೆ ನೀಡಿದರೆ ಅಥವಾ ಚಿಕ್ಕ ಮಕ್ಕಳಿಗೆ ಇದರಿಂದ ಪುಸ್ತಕ ಪೆನ್ನಿನ ವ್ಯವಸ್ಥೆ ಮಾದಿದರೆ,ಇದರಿಂದ ಅವರ ಜೀವನದ ಒಂದು ಮುಖ್ಯ ತಿರುವಿಗೆ ನಮ್ಮ ಕೈ ಜೋಡಿಸಿ ಒಳ್ಳೆ ಹಾದಿಯನ್ನು ತೋರಿಸಿದ ಹಾಗೆ ಆಗುತ್ತೆ, ಹಾಗು ನಮ್ಮ ಪೂರ್ವಜರು ಬಾಳಿ ಬದುಕಿದ ಊರಿಗೆ ನಮ್ಮ ಕಿಂಚಿತ್ತು ಸೇವೆಯೋ ಆದ ನೆಮ್ಮದಿ ಸಿಗುತ್ತದೆ.
ಆದರೆ ಈ ಯೋಚನೆ ತುಂಬ ಸುಲಬ ಆದರೆ ಕಾರ್ಯಗತಗೊಳಿಸಲು ಸಹೃದಯ ಬೇಕು ಯಾಕಂದ್ರೆ ದುಡ್ಡು ಯಾರಿಗೆ ಬೇಡ ಹೇಳಿ? ಸುಮ್ಮನೆ ೫ ಸಾವಿರ ರೂ ನ ಯಾರಿಗೋ ಕೊಡಬೇಕು ಅಂದ್ರೆ ಮನಸ್ಸು ಹೇಳತ್ತೆ, ನಿನ್ನ ಕಷ್ಟ ನೀನು ತೀರುಸ್ಕೋ ಮೊದಲು ಅಂತ, ಆದರೆ ನಿಜವಾದ ಕಷ್ಟ ನಮ್ಮಗಳದ್ಯಾರದ್ದೂ ಅಲ್ಲ ಅನ್ಸುತ್ತೆ, ನಿಜವಾದ ಕಷ್ಟ ೩ ಹೊತ್ತು ಊಟಕ್ಕೆ ಇಲ್ಲದವರದ್ದು , ವರುಷಕ್ಕೊಂದು ಬಟ್ಟೆ ತಗೊಳಕ್ಕೆ ಆಗಲ್ಲ ಅವರದ್ದು, ಮಳೆ ಬಂದರೆ ಸೂರಿಗೆ ಹಂಚಿಲ್ಲದೆ ರಾತ್ರಿಯೆಲ್ಲ ನಿದ್ದೆ ಇಲ್ಲದೆ ಕುಳಿತಿರುವವರದ್ದು, ಸಣ್ಣ ಫೀಸ್ ಕಟ್ಟಲಾಗದೆ ತಮ್ಮ ಭವಿಷ್ಯವನ್ನ ಕತ್ತಲೆಗೆ ತಲ್ಲುವವರದ್ದು, ಆದರೆ ನಮಗೆ ಇದಾವುದರ ಚಿಂತೆಯೂ ಇಲ್ಲ ಆದರೂ ಕಷ್ಟಗಳನ್ನ ಹುಟ್ಟಿ ಹಾಕಿಕೊಳ್ಳುತ್ತೇವೆ, ನಾವೇ ಅತಿ ಕಷ್ಟದಲ್ಲಿ ಇರುವವರ ಹಾಗೆ ಕಂಡ ಕಂಡವರಿಗೆಲ್ಲ ಹೇಳಿ ಕೊಳ್ಳುತ್ತೇವೆ, ನಿಜವಾಗಿ ಯೋಚಿಸಿ, ಮೇಲೆ ಹೇಳಿದ ಕಷ್ಟದಲ್ಲಿ ಒಂದಾದರೂ ನಮಗಿವೆಯೇ ?
ಗೆಳೆಯರೇ ನಾವೇಸ್ಟು ಸುಖಿಗಳು ಅಂತ ನಾವಿನ್ನು ನಮ್ಮನ್ನೇ ಅರಿತಿಲ್ಲ ಅದ್ದರಿಂದ ಒಂದು ಸಣ್ಣ ಸಂಕಲ್ಪ ಮಾಡೋಣ ಹೊಸ ವರುಷದ ಹೊಸ ಹಾದಿಯಲ್ಲಿ ನಮ್ಮ ಹಳ್ಳಿಯ ಹಾದಿಗಳನ್ನ ಹೊಕ್ಕು ನೋಡೋಣ, ನಮ್ಮ ಆಸರೆಯ ಕೈ ಯನ್ನು ಸಹಾಯ ಬೇಡುವವರಿಗೆ ನೀಡಿ ಮೇಲೆತ್ತೋಣ, ಇದಕ್ಕೆ ನಮ್ಮ ದುಡಿಮೆಯ ಕೆಲವ ಶೇ ೧ ಬಾಗ ಮಾತ್ರ ಸಾಕು, ಇನ್ನು ಉಳಿದ ಶೇ ೯೯ ಬಾಗದ ಬಗ್ಗೆ ನಾನು ಏನನ್ನು ಕೆಳುವುದಿಲ್ಲ, ಆದರೆ ಈ ೧ ಬಾಗದಿಂದ ನಮ್ಮ ನಿಸ್ವಾರ್ಥ ಸೇವೆಯ ಹಣತೆ ಹಚ್ಚೋಣ, ನಿಜವಾದ ಆತ್ಹ್ಮತ್ರುಪ್ತಿಯನ್ನ ನಮ್ಮ ಕೊಡುಗೆಯಲ್ಲಿ ಕಾಣೋಣ.
ಪ್ರೀತಿಯ ಮಿತ್ರರೆ....
ಒಮ್ಮೆ ತುಂಬು ಹ್ರುದಯದಿಂದ, ಯಾರಿಂದನು ಏನನ್ನೂ ಬಯಸದೆ, ಒಬ್ಬರಿಗೆ ಕಿಂಚಿತ್ತು ಸಹಾಯ ಮಾಡಿ ಅಲ್ಲಿ ನಮ್ಮ ನೆರಳಿನ ಗುರುತನ್ನೂ ಬಿಡದೆ ಬಂದು ನೋಡಿ, ನಿಜವಾದ ಆತ್ಹ್ಮತ್ರುಪ್ತಿ, ಸಂತೋಷನ ಅಂದು ನಾವು ಮೊದಲ ಬಾರಿಗೆ ನೋಡುತ್ತೇವೆ, ಸಂತೋಷನ ಯಾರೋ ಎಲ್ಲಿಂದನೂ ಕೊಂಡುಕೊಲ್ಲೋಕ್ಕಗಲ್ಲ ಅದು ನಮ್ಮಲ್ಲೇ ಇದೆ, ಅದನ್ನು ಗುರುತಿಸಿ, ಅನುಭವಿಸುವ ಕಡೆಗೆ ನಮ್ಮ ಚಿಂಥನೆಯನ್ನ ಬೆಳೆಸಿಕೊಳ್ಳೋಣ, ಅಂತ ಹಾದಿಯೆಡೆಗೆ ಕರೆದೊಯ್ಯುವ ಒಂದು ಸಾದನವೇ ಈ ನಿಸ್ವಾರ್ಥ ಧಾನ/ಕೊಡುಗೆ/ಸೇವೆ.
ಹೊಸ ವರುಷ ಬಂದಿದೆ, ಆದರೆ ಈ ವರುಷದ ನಮ್ಮ ದುಡಿಮೆಯ ಶೇ ೧ ಬಾಗವನ್ನು, ನಿಜವಾದ ಹೂಡಿಕೆಯಲ್ಲಿ ತೊಡಗಿಸೋಣ, ನಮ್ಮ ಉಳಿದ ಶೇ ೯೯ ರಿಂದ ಪಡೆಯಲು ಆಗದ ಸಂತೋಷ ನಮಗೆ ಈ ನಿಸ್ವಾರ್ಥದ ಕಿಂಚಿತ್ತು ಹೂಡಿಕೆಯಿಂದ ಸಿಗುತ್ತೆ ಅನ್ನೋ ಬರವಸೆಯನ್ನಂತು ನಾನು ಈ ವರ್ಷದ ಸಂದೇಷವಾಗಿ ನೀಡಬಲ್ಲೆ.
- ಶರ
--------------------------------------------------------------------------------------------------------------------------

30, 60 ಚಟಕ್ಕೆ ಬಿದ್ದೊನ್ನ ಹೆ೦ಗಾದ್ರು ಬಿಡಿಸ್ಬಹುದು, ಈ 30x40 ಚಟಕ್ಕೆ ಬಿದ್ದೊನ್ನ ಅವನ್ದೆ ಸೈಟಲ್ಲಿ ಮನ್ನಾಕಿ ಮುಚ್ಛೊ ತನಕ ಬಿಡ್ಸೊಕ್ಕಾಗಲ್ಲ - ಶರ