Sunday, March 18, 2018

ಕಥೆಗಳು


ಒಂದು ಸಲಿ ಒಬ್ಬ ಬ್ರಾಹ್ಮಣ ಸಂಚರಿಸುವಾಗ ರಾತ್ರಿ ಆಗಿರತ್ತೆ ಅವನು ಅಲ್ಲೇ ಒಂದು ಹಳ್ಳಿಯ ಮನೆಗೆ ಹೋಗಿ ಉಳಿಲಿಕ್ಕೆ ಜಾಗ ಕೇಳ್ತಾನೆ. ಆ ಮನೆಯ ಯಜಮಾನ ತುಂಬಾ ಖುಷಿಯಿಂದ ಅವ್ರಿಗೆ ಭೋಜನದ ವ್ಯವಸ್ಥೆ ಮಾಡಿ ಮಲಗೋ ಮೊದಲು ಅವನ ಮನೇಲಿದ್ದ ಹಸುವಿನ ರುಚಿಯಾದ ಹಾಲು ಕೊಡ್ತಾನೆ. ಅದನ್ನು ಕುಡಿದು ಮಲಗಿದ ಬ್ರಾಹ್ಮಣ ರಾತ್ರಿ ಈ ಹಾಲು ಎಷ್ಟು ರುಚಿಯಾಗಿದೆ ಈ ಹಸು ನನಗೆ ಬೇಕು ಅಂತ ಅನ್ನಿಸಿ ಬೆಳಗಾಗುವುದರೊಳಗೆ ಅದನ್ನ ಅಪಹರಿಸಿ ಎದ್ದು ಹೋಗಿಬಿಡುತ್ತಾನೆ.
ಬೆಳಗ್ಗೆ ಎದ್ದ ಮೇಲೆ ಆ ಯಜಮಾನ ಹಸು ಇಲ್ಲದ್ದು ನೋಡಿ, ಅಯ್ಯೋ ನಾನೇ ಬ್ರಾಹ್ಮಣನ ಅವಶ್ಯಕತೆ ಅರಿತು ದಾನ ಮಾಡಿಬಿಡಬೇಕಿತ್ತು...ಇರಲಿ ಅವ್ರನ್ನ ಹುಡುಕಿಕೊಂಡು ಹೋಗಿ ಸಿಕ್ಕರೆ ಅಲ್ಲೇ ದಾನ ಮಾಡಿ ಬಿಡೋಣ ಅಂತ ಹೊರಡುತ್ತಾನೆ. ದಾರೀಲಿ ಹೋಗುತ್ತಾ ಇದ್ದ ಬ್ರಾಹ್ಮಣ ಅಯ್ಯೋ ಎಂಥ ತಪ್ಪು ಮಾಡಿದೆ ಅನ್ನಿಸಿ ಹಸುವನ್ನು ವಾಪಸ್ ಕೊಡೋಣ ಅಂತ ಬರ್ತಾನೆ. ಇಬ್ಬರು ದಾರಿ ಮದ್ಯದಲ್ಲಿ ಸಿಕ್ಕಾಗ ಬ್ಬ್ರಾಹ್ಮಣ ಹಸು ಕೊಟ್ಟು ಕೇಳ್ತಾನೆ ನಂಗೆ ಎಂದು ಬರದ ಕಳುವು ಮಾಡೋ ಬುದ್ದಿ ಯಾಕೆ ಬಂತು ಅಂತ. ಆಗ ಕೇಳ್ತಾನೆ ರಾತ್ರಿ ನನಗೆ ಕೊಟ್ಟ ಊಟ ನಿನ್ನ ಮನೆಯದ್ದ ಅಂತ. ಆಗ ಯಜಮಾನ ಹೇಳ್ತಾನೆ, ಇಲ್ಲ ನಮ್ಮ ಮನೆಯಲ್ಲಿ ಎಲ್ಲ ಅಡುಗೆಯ ಪದಾರ್ಥ  ಖಾಲಿಯಾಗಿತ್ತು ನನ್ನ ಪಕ್ಕದ ಮನೆಯವರ ಬಳಿ ತಂದು ಅಡುಗೆ ಮಾಡಿದ ಪದಾರ್ಥ ಅಂತಾನೆ. ಆಗ ಆತನ ಪಕ್ಕದ ಮನೆಯವನು ಎಲ್ಲಿಂದ ದುಡಿದು ತಂದ ಪದಾರ್ಥ ಅಂತ ಹಿನ್ನಲೆ ಹುಡುಕಿದಾಗ ಗೊತ್ತಾಗತ್ತೆ ಅದು ಅಧರ್ಮ ಮತ್ತು ಕಳ್ಳತನದಿಂದ ದುಡಿದು ತಂಡ ಪದಾರ್ಥ ಅಂತ. ಅದನ್ನು ಉಂಡ ಬ್ರಾಹ್ಮಣನ  ಬುದ್ದೀಲಿ  ಎಂದೂ  ಬರದ ಕಳ್ಳತನದ ಬುದ್ದಿ ಬಂದಿರತ್ತೆ.
ತಾತ್ಪರ್ಯ : ನಾವು  ನಿತ್ಯ ದುಡಿದು ತಿನ್ನುವ ಅನ್ನ ನ್ಯಾಯ ನೀತಿ ಮಾರ್ಗದಲ್ಲದಿದ್ದರೆ, ಅದು ನಮ್ಮ ಮತಿಯ ಹಾಗು ಭವಿಷ್ಯಕ್ಕೆ ಮಾರಕವಾಗೋದು ಖಂಡಿತ.
ಅದಕ್ಕೆ ನಮ್ಮ ಡಿವಿಜಿ ಹೇಳ್ತಾರೆ ಅಣ್ಣ ಉಣುವಾಗ ಕೇಳು ಅದು ನಿನ್ನ ಬೆಮರಿನ ಫಲವೋ ಇಲ್ಲ ಪರರ ಕಣ್ಣೀರೋ ಅಂತ....ಎಷ್ಟೇ ಆದರು ಸ್ವಾಭಿಮಾನದ ಉತ್ತಂಗದಲ್ಲಿ ಬದುಕಿ ಹೋದ ದಾರ್ಶನಿಕರಲ್ಲವೆ. ಜೀವನ ತುಂಬಾ ಮೌಲ್ಯವಾದದ್ದು ಅದನ್ನ ಶ್ರೇಷ್ಠವಾಗಿ ಬದುಕಿ ಸಾರ್ಥಕತೆ ಪಡೀಬೇಕು.  - ಶರ

--------------------------------------------------------------------------------------------------------------------------

ಒಂದು ಸಾರಿ ಕರ್ಣ ದಾನ ಮಾಡುವಾಗ ಎಡಗಡೆ ಇರುವ ಒ೦ದು ಬಿಂದಿಗೆ ತೆಗೆದು ಬ್ರಾಹ್ಮಣರಿಗೆ ದಾನ ಮಾಡ್ತಾನೆ. ಇಸ್ಕೊಂಡ ಮೇಲೆ ಬ್ರಾಹ್ಮಣರು ಆಕ್ಷೆಪನೆ ಮಾಡ್ತಾರೆ, ಅಯ್ಯೊ ಎಡಗೈನಲ್ಲಿ ಕೊಟ್ರಿ ಅಪಚಾರ ಆಯಿತು ಅಂತ. ಆಗ ಕರ್ಣ ಹೆಳ್ತಾನೆ ಅದು ಬಂಗಾರದ ಬಿಂದಿಗೆ ಎಲ್ಲಿ ಎಡ ಕೈ ಇಂದ ಬಲ ಕೈಗೆ ತಗೊಳೊ ಅಸ್ಟರಲ್ಲಿ ಮನಸ್ಸು ಬದಲಾಗಿ ಕೊಡಬೇಡ ಬಂಗಾರದ್ದು ಅನ್ನುತ್ತೊ ಅಂತ ಹಾಗೆ ಕೊಟ್ಟೆ ಅಂತಾನೆ.
ತಾತ್ಫರ್ಯ : ದಾನ ಮಾಡೊ ಇಚ್ಛೆ ಬಂದಾಗ ಬುದ್ದಿಗೆ ಅನಿಸಿದ ಕೂಡಲೆ ಕೈಯಿಂದ ಕಾರ್ಯಗತ ಮಾಡಿಬಿಡಬೇಕು. ವಿಚಾರ ಮನಸ್ಸಿಗೆ ಹೊದ್ರೆ ಮಾನವಸಹಜ ಆಸೆ ಆವರಿಸಿ ಎಲ್ಲವು ನನಗೆ ಇರಲಿ ಅನ್ನಿಸಿಬಿಡತ್ತೆ. - ಶರ
--------------------------------------------------------------------------------------------------------------------------

No comments: