Monday, March 19, 2018

ಪ್ರಕೃತಿಯ ಪಾಠ

ಪ್ರಕೃತಿಯ ಪಾಠ ೧ : ಅವಧೂತನು ಬೆಂಕಿಯಿಂದ ಕಲಿತ ಪಾಠ :
ಬೆಂಕಿಯನ್ನು ನೋಡಿ ನಾವು ಅದರಂತೆ ತೇಜಸ್ವಿಗಳಾಗಬೇಕು, ಅಂದರೆ ಅದು ಬೇರೆಯವರಿಗೆ ಕೊಡುವ ಬೆಳಕಿನ ಹಾಗೆ ಬೇರೆಯವರ ಬಾಳಿಗೆ ಬೆಳಕು ಕೊಡುವಂತವರಾಗಬೇಕು. ಬೆಂಕಿ ಕತ್ತಲನ್ನ  ಓಡಿಸತ್ತೆ, ಹಾಗೆ ನಾವು ನಮ್ಮಲ್ಲಿರುವ ಅಜ್ನ್ಯಾನವನ್ನು ಓಡಿಸಬೇಕು.
ಬೆಂಕಿ ಹೇಗೆ ಸೌದೆಯನ್ನು ಇಟ್ಟಷ್ಟು ಸುಟ್ಟು ಇನ್ನು ಪ್ರಜ್ವಲಿಸತ್ತೊ ಹಾಗೆ ನಾವು ತಪಸ್ಸಿನಿಂದ ( ಸದ್ವಿಚಾರಗಳ ಮನನ ಶಕ್ತಿಯಿಂದ) ಕೆಟ್ಟ ವಿಚಾರಗಳ್ಳನ್ನ ಸುಟ್ಟು ಕಂಗೊಳಿಸುವಂತವರಾಗಬೇಕು.
ಬೆಂಕಿ ತುಪ್ಪ ಹಾಕಿದರು ಸುಡುತ್ತೆ ಮಲ ಹಾಕಿದರು ಸುಟ್ಟು ಜಿರ್ಣಿಸಿಕೊಳ್ಳತ್ತೆ ಹಾಗೆ ಬಾಳಿನಲ್ಲಿನ ಯೆಶಸ್ಸು, ಅಪಮಾನ, ನಿಂದೆ ಇವನ್ನೆಲ್ಲ ಒಂದೇ ಸಮನಾಗಿ ಜೀರ್ಣಿಸಿಕೊಂಡು ಪ್ರಜ್ವಲಿಸಬೇಕು.
ಕೊನೆಯದಾಗಿ ನಾವು ಬೆಂಕಿಯಸ್ಟೆ ನಿಷ್ಟೂರರಾಗಿರಬೇಕು, ಅಂದರೆ ಯಾರಾದರೂ ಮುಟ್ಟಿದರೆ ಸುಡುವಂತಿರಬೇಕು (ಜ್ನ್ಯಾದದಲ್ಲಿ ಶ್ರೇಷ್ಠತೆ ಹೊಂದಿ ಅದರ ಪ್ರಖರತೆಗೆ ನಮ್ಮ ಬಗ್ಗೆ ಅನ್ಯತ ಮಾತನಾಡುವವರು ಹೆದರಬೇಕು). ದೂರದಲ್ಲೇ ನಿಂತು ನಮ್ಮ ಜ್ನ್ಯಾನದ ಬೆಳಕಿನ ಉಪಯೋಗ ಪಡಿಬೇಕೇ ಹೊರತು ಹಾಳು ಮಾಡಲು ಬಂದು ಮುಟ್ಟಿದರೆ ಅವರಿಗೆ ಅದರ ಉರಿವಿನ ಅರಿವಾಗುವಂತಿರಬೇಕು.
 - ಶರ

Sunday, March 18, 2018

ಬರಹಗಳು


Onsite ಮಂದಿಗಳ ಯಕ್ಷಪ್ರಶ್ನೆ (ಇದರಲ್ಲಿ ನಾನು ಬಾಗಿ) :
ಹೊರದೇಶಗಳಲ್ಲಿ (ಅದರಲ್ಲೂ ಕೋಲ್ಡ್ ದೇಶಗಳಲ್ಲಿ) ಇರುವವರು ತಿಂಗಳಾನುಗಟ್ಟಳೆ ಚಳಿಯ ಬದುಕು, ಭಾರತದಲ್ಲಿನ ವಿಟಮಿನ್ D ಗೆ ಪೂರಕವಾದ ಇ ದೇಹಕ್ಕೆ ಅದರ ಕೊರತೆಯಿಂದ ಬರುವ health challenges, ಹಬ್ಬ ಹರಿದಿನಗಳಿಗೆ ಸಂಭ್ರಮಿಸಲು ಇಲ್ಲದ ಅಪ್ಪ, ಅಮ್ಮ, ಮತ್ತು ಬಂದು ಬಾಂಧವರು, ಇಷ್ಟರ ಮೇಲು ಜಾಬ್ ಮಾರ್ಕೆಟ್ ಕ್ರ್ಯಾಶ್ ಆಗಿ ಅಲ್ಲಿನ ಜನಾನೇ  ನಮ್ಮ  ದೇಶ ಬಿಟ್ಟು ಹೋಗಿ ಅಂದ್ರೂನೂ, ನಾವು ಸ್ನೇಹಿತರ ಮನೆಯಲ್ಲಿ ಸೇರಿದಾಗಲೆಲ್ಲ ಮೂರು ಗಂಟೆಯಲ್ಲಿ ಒಂದು ಗಂಟೆ ಬರೀ ಭಾರತಕ್ಕೆ ಹೋಗಬೇಕಾ ಬೇಡ್ವಾ ಇದೇ ಡಿಸ್ಕಶನ್ಸ್, ಆಮೇಲೆ ನಾವು ಮಾಡ್ಕೊಂಡಿರೋ ಕನ್ನಡ ಬಳಗಗಳು ಸೇರಿದಾಗಲೂ ಇದೆ ವಿಷಯದ ಬಗ್ಗೆ ಶೃಂಗಸಭೆಗಳೇ ನಡೆದು ಹೋಗ್ತಾವೆ. ಕೊನೆಗೆ ಮಿನಿಮಮ್  ಮೂರರಿಂದ ಐದು ವರ್ಷ ಆದರು ಇ  ಯಕ್ಷಪ್ರಶ್ನೆಗೆ ಉತ್ತರ ಸಿಗದೆ  ಬಹಿರಂಗದಲ್ಲಿ ನಗುತ್ತಾ, ಅಂತರಂಗದಲ್ಲಿ ನಿರಂತರ ಆತ್ಮಾವಲೋಕನ ಮಾಡ್ಕೋತಾ ಇರ್ತಿವಿ.
ಇದೇ ಸ್ವಯಂ ನಾವು ರಜಕ್ಕೆ ಭಾರತಕ್ಕೆ ಬಂದಾಗ ಒಂದು ದಿನ ಸಂಬಂದಿಕರ ಮನೆಗೆ ಕೆಂಗೇರಿಯಿಂದ  KR ಪುರಂ ಗೆ ಅದು ಟ್ಯಾಕ್ಸಿಲಿ ಹೋಗಿ, ಅವತ್ತು ಸಂಜೇನೇ O My God, ಈ ಟ್ರಾಫಿಕ್ , ಈ ಧೂಳು ಬೇಡಪ್ಪಾ, ಇಟ್ಸ್ ವೆರಿ HOT ಅಂತ ಸುಂಸುಮ್ನೆ ಕಾರಣ ಹುಟ್ಟುಸ್ಕೊಂಡು easy ಯಾಗಿ ಭಾರತ ಬಿಟ್ಟು ವಾಪಾಸ್ ಹೋಗುವ  Decision ತಗೋತೀವಿ (ಅದು ವಿಥೌಟ್ ಡಿಸ್ಕಶನ್ ಮತ್ತೆ ವಿಥೌಟ್ ಡೌಟ್).
Somewhere ನಂಗೆ ಅನ್ಸುತ್ತೆ ಇ ಭಾರತ ಬಿಟ್ಟು ಹೋಗೋ decision ತಗೋವಾಗ ನಮ್ಮ ಮೈಮೇಲೆ ಕೆಲವು ದೇವತೆಗಳು ಬಂದು ಸಹಾಯ ಮಾಡುತ್ತವೆ ಅಂತ. ಆ ದೇವತೆ ಗಳು ಡಾಲರಮ್ಮ , ಪೌಂಡಾಂಬೆ, ಯೂರೇಶ್ವರಿ ಹೀಗೆ ಮತ್ತು ಹಲವು ದೇಶದ ಲಕ್ಷ್ಮಿಯರು.......:)
ಸೂಚನೆ : ಇದು ನನ್ನ ಸ್ವಂತ ಅಭಿಪ್ರಾಯ, ಯಾರಿಗಾದರು  ಇರುಸುಮುರಿಸಾದರೆ ಇದನ್ನ ಒಂದು ಹಾಸ್ಯ ಬರಹದ ರೂಪದಲ್ಲಿ ಓದಿ. ಕೊನೆಗೆ ಒಂದು ಮಾತು ಬರಿಲೇಬೇಕು ನಮ್ಮ ಭಾರತ ಕರ್ಮಭೂಮಿ (ಅಂದರೆ ಶ್ರೇಷ್ಠಸಾಧನೆಗೆ ಸಾಕಾರವಾಗುವ ನಾಡು) ಇನ್ನೆಲ್ಲ ಭೋಗಭೂಮಿಗಳು ಅಂತ ಕೇಳಿದ ನೆನಪು - ಶರ.

--------------------------------------------------------------------------------------------------------------------------

ಈಗಿನ ರಾಜಕೀಯ ವ್ಯವಸ್ಥೆಯಲ್ಲಿ ಬಹುತೇಕರು ಒಂದು ಬಾರಿ  MLA ಅಥವಾ MP ಆದರೆ ಕಡಿಮೆ ಅಂದರೂ  ಆತನ ಮೂರು ತಲೆಮಾರಿನ ಮಕ್ಕಳು ಅಥವಾ ಬಂದುಬಾಂದವರು ಆ ಅಧಿಕಾರದ ಚುಕ್ಕಾಣಿ ಹಿಡಿದು ಕೂತುಬಿಡುತ್ತಾರೆ. ಇವ್ರೆಲ್ಲ ಸೇರಿ ಇನ್ನು ಆರು ತಲೆಮಾರು ಕೂತು ತಿನ್ನುವಷ್ಟು ಮಾಡಿ ಮಣ್ಣಾಗಿ ಹೊಗ್ತಾರೆ. ಆದರೆ ಒಂದು ವಿಷ್ಯ ತಿಳಿದಿರಲಿ ಯೋಗ್ಯರಲ್ಲದ ಮಕ್ಕಳಿಗೆ ಅಧಿಕಾರ ಕೊಟ್ಟರೆ ಅವರ ಪಾಪ ಕರ್ಮದಲ್ಲಿ ನಿಮಗೂ ಕಟ್ಟಿಟ್ಟ ಪಾಲು ಇರುತ್ತದೆ. ಇಂತವರೆಲ್ಲ ನಮ್ಮ ಭವ್ಯ ಭಾರತದ ಇತಿಹಾಸ ಸ್ವಲ್ಪ ತಿರುಗಿ ನೋಡಿದ್ರೆ ಎಂತಾ ಉದಾಹರಣೆ ಸಿಗುತ್ತೆ ಗೊತ್ತಾ?
ಇತಿಹಾಸ ಪುಟಗಳಲ್ಲಿ : ದುಷ್ಯಂತ ಮತ್ತು ಶಾಕುಂತಲೆಯ ಪುತ್ರ ಭರತ ಚಕ್ರವರ್ತಿ (ಇವರಿಂದಾನೆ ನಮ್ಮ ದೇಶ ಭಾರತ ಅಂತ ಹೆಸರು ಪಡೆದದ್ದು) ಯುವರಾಜನನ್ನು ಘೋಷಿಸಬೇಕು ಅನ್ನುವ ಸಂದರ್ಭ ಬಂದಾಗ ತನ್ನ ಒಂಬತ್ತು ಜನ ಮಕ್ಕಳಲ್ಲಿ ಯಾರಲ್ಲೂ ರಾಜ್ಯವಾಳುವ ಯೋಗ್ಯತೆ ಕಂಡುಬರದಿದ್ದಾಗ ತನ್ನ ಮಂತ್ರಿಯ ಮಗನನ್ನು ಯುವರಾಜ ಅಂತ ಘೋಷಿಸುತ್ತಾನೆ. ಅವ್ನು ಹೇಳ್ತಾನೆ ಅಧಿಕಾರ ಅನ್ನೋದು ಕರ್ಮದಿಂದ(ಗುಣಶ್ರೇಷ್ಠತೆ) ಪಡೀಬೇಕು ಹೊರತು ಜನ್ಮದಿಂದಲ್ಲ(ಮಗನಾಗಿ ಹುಟ್ಟಿದ್ದಷ್ಟೇ ಅರ್ಹತೆಯಲ್ಲ) ಅಂತ. 
ಹೀಗೆ ಒಬ್ಬ ವ್ಯಕ್ತಿ ಒಳ್ಳೆ ಗುರಿಯಿಂದ ಒಂದು ಫ್ಯಾಕ್ಟರಿ ಕಟ್ಟುತಾನೆ ನೂರಾರು ಜನಕ್ಕೆ ಜೀವನ ಕೊಡ್ತಾನೆ ಆದ್ರೆ ಅವನ ಮಗ ಅರ್ಹನಲ್ಲದಿದ್ರೂ ಪುತ್ರವ್ಯಾಮೋಹಕ್ಕೆ ಸಿಕ್ಕಿ ಅಧಿಕಾರ ಕೊಟ್ರೆ ಮೂರು ವರ್ಷದಲ್ಲೇ ಅದನ್ನು  ಮಾರಿ ಕೆಲಸಗಾರರ ಬದುಕಿಗೆ ಕಂಟಕವಾಗ್ತಾನೆ ಆ ಪಾಪ ಕರ್ಮದ ಫಲ ತಂದೆಯಾದಿಯಾಗಿ ಪೂರ್ವಜರಿಗೂ ಸೇರುತ್ತೆ ಹಾಗು ಅವರು  ಗಳಿಸಿದ ಪುಣ್ಯವೂ ಗ್ರಾಸವಾಗುತ್ತೆ.
ಹೀಗೆ ರಾಜಕೀಯದಲ್ಲಂತೂ ಇದು ಇನ್ನೂ ಅಪಾಯಾಕಾರಿ ಆದರೆ ಇಂತ ನೀತಿ ಪಾಲಿಸೋ ಕಾಲಘಟ್ಟ  ಮೀರಿ ದಶಕಗಳೇ ಆಗಿದೆ. ಆದರೂ ವಿಷ್ಯ ತಿಳ್ಕೊಳೋದ್ರಲ್ಲಿ ತಪ್ಪಿಲ್ಲ. ಪಾಲಿಸೋದು ಬಿಡೋದು ಅವರವರ ಇಚ್ಛೆಗೆ ಬಿಟ್ಟದ್ದು. - ಶರ
-------------------------------------------------------------------------------------------------------------------------

ನಾನ್ಯಾರು? : ಪ್ರತಿಯೊಂದು ಜಾತಿ, ಮತ ಮತ್ತು ಧರ್ಮಗಳ ಜನರು  ಅವರವರ ತತ್ವ ಸಿದ್ಧಾಂತದ ಮೇಲೆ ಆಯಾ ತತ್ವ ಅನುಸರಿಸಿ ಮೋಕ್ಷ ಅಥವಾ ಜೀವಾತ್ಮನ ಸಾಧನೆಯ ಉತ್ತುಂಗವೇರಿದ  ಗುರುಗಳ ಹಾದಿ ಹಿಡಿದು ಹೊರಟಿರುತ್ತಾರೆ. ದಾರಿಗಳು ಹಲವು ಆದರೆ ಎಲ್ಲರ ಸಾಧನೆಯ ಗುರಿ ಒಂದೆ.
ಹೀಗಿರುವಾಗ ಈ ರಾಕ್ಷಸಪ್ರವೃತ್ತಿಯ ರಾಜಕಾರಣಿಗಳು ವೇಷ ಬದಲಿಸಿ ಆಯಾ ಗುಂಪುಗಳಲ್ಲಿ ಅವರಂತೆ ಬೆರೆಯುತ್ತಾರೆ. ರಾಕ್ಷಸ ಜಾತಿಗೆ ಗುಂಪಿನಲ್ಲಿ ಜನರಿಗೆ ಇವರ ಬಳಿ ಇರುವ ವಸ್ತುಗಳನ್ನು ದೋಚಲು  ಅಥವಾ ಇವರನ್ನೇ ಭಕ್ಷಣೆ ಮಾಡಲು ಇವರೆಲ್ಲ ಗುಂಪಿನಲ್ಲಿದ್ದರೆ  ಕಷ್ಟಸಾಧ್ಯ. ಅದಕ್ಕೆ ಆದಷ್ಟು ಗುಂಪನ್ನು ದಾರಿತಪ್ಪಿಸಿ, ಗುರಿಯಿಂದ ದೃಷ್ಟಿ ಮರೆಸಿ, ರಟ್ಟೆ ಬಲ ಹಾಗು ಬುದ್ಧಿಶ್ಯಕ್ತಿಯ ಸಾಮರ್ಥ್ಯಕ್ಕೆ ಮಂಕು ಬಡಿಸಿ,  ಸವಲತ್ತಿನ  ಸೋಗು ಹಾಕಿ, ಇನ್ನೇನು  ಇವರಿಂದ ಏನು ಸಾಧ್ಯವಿಲ್ಲ ಅಂದಾಗ ಅವರಲ್ಲಿರು ವಸ್ತುಗಳನ್ನು ದೋಚುವುದು, ಇಲ್ಲ ಅವರನ್ನೇ ಭಕ್ಷಣೆ ಮಾಡಿ ಅವರ ಕಾರ್ಯ ಸಿದ್ದಿಸಿಕೊಳ್ತಾರೆ.
ನೀನು (ಆಯಾ ಜಾತಿ) ಗುರಿಮುಟ್ಟುವ ದಾರಿಗೆ ಸ್ಟ್ರೀಟ್ ಲೈಟ್ ಹಾಕಿಸ್ತಿನಿ ಸೊ ನೀನು ರಾತ್ರಿನೂ ನಡೆದು ಬೇಗ ಗುರಿಮುಟ್ಟಬಹುದು. ಇಲ್ಲ ದುರುಳರು ಪಕ್ಕದವರ ಹಾಡಿಗೆ ಮುಳ್ಳು ಹಾಕು ಆಗ ಅವರು ಬರುವುದು ತಡವಾದಾಗ ನೀನು ಬೇಗ ಕ್ರಮಿಸಿ ಗುರಿ ಮುಟ್ಟು ಅನ್ನೋ ಕಲಿಪ್ರವೃತ್ತಿ. ಇಲ್ಲ ಒಂದೇ ದಾರೀಲಿ ಹೊರಟ ಗುಂಪಿನಲ್ಲೆ ಆ ನಾಲ್ಕು ಜನ ಹೇಳಿದ್ದು ಈ ದಾರಿಯಲ್ಲಿ ನಡೆದ ಗುರುಗಳ ತತ್ವ ಅಲ್ಲ ಸೊ, ಈ ದಾರಿಯಿಂದ ಕವಲೊಡೆದು ನಮ್ಮದೇ ದಾರಿ ಮಾಡ್ಕೊಳೊಣ ಅಂತ ಒಳಪಂಗಡ ಸೃಷ್ಟಿಸೋದು. ಇಷ್ಟೆಲ್ಲ ಕುಹಕ ಪ್ರಲಾಪದೊಳಗೆ ಮತಿಬ್ರಹ್ಮಣೆ  ಮಾಡಿಸಿ ಗುರು ಸಿದ್ಧಾಂತವನ್ನ ಗೋವಿಂದ  ಅನ್ನಿಸಿ, ಸಾಧನೆಯ  ಹಾದಿಯ ದಾರಿ ತಪ್ಪಿಸುತ್ತಾರೆ. ಇದ್ರಲ್ಲಿ ನಮ್ಮ ಪಾಲು ಸರಿಸಮ ಸ್ವಂತ ಬುದ್ದಿ ಇರದೆ  ಕಂಡವರಿಗೆ ಕೊಟ್ಟು ಬಡುಸ್ಕೊಳ್ಳೊ  ಮಂದಿ ನಾವು, ಮೊದಲು ನಮ್ಮನ ಸರಿ ಮಾಡ್ಕೋಬೇಕು.
ತೃಪ್ತಿಯಾಗಿ  ಬದುಕೋಕ್ಕೆ, ಬೆಳಗ್ಗೆ ಎದ್ದ  ಕೂಡ್ಲೇ ಮೈ ಮುರಿದು, ರಟ್ಟೆ ಸೆಟೆದು ಇಲ್ಲ ಬುದ್ದಿ ಬಳಸಿ ದುಡಿಮೆ ಮಾಡು. ಬಂದಿದ್ದ ದುಡ್ಡಲ್ಲಿ ಹನ್ನೆರಡಾಣೆ ತಿನ್ನು, ನಾಲ್ಕಾಣೆ ಧರ್ಮಕ್ಕೋ, ನಿಶ್ಶಕ್ತರಿಗೋ, ಧರ್ಮಕ್ಕೊ  ಇಲ್ಲ ವಿದ್ಯಾಭ್ಯಾಸಕ್ಕೋ ವ್ಯಯಿಸು. ಪ್ರೀತಿ ಕೊಡು ಪ್ರೀತಿ ಪಡಿ. ಕೊನೆಗೆ ಬಿಸಿ ಅನ್ನದ್ ಜೊತೆ ತಿಳಿ ಸಾರು ಹಾಕ್ಕೊಂಡು ಉಂಡು, ಮಂದವಾದ ಮಜ್ಜಿಗೆಗೆ ಹದವಾಗಿ ವಗ್ಗರಣೆ ಹಾಕಿ ತಣ್ಣಗೆ ಕುಡಿದು ಮಲ್ಕೊ...ಇದಕಿಂತ  ಲೈಫ್ ಬೇಕಾ....ಹಹಹಹಹಹಾ - ಶರ
--------------------------------------------------------------------------------------------------------------------------

ಮನಮುಟ್ಟುವ ಸನ್ನಿವೇಶ ಮತ್ತು ನೀತಿಪಾಠ : ಕುರುಕ್ಷೇತ್ರದ ಹದಿನೇಳನೇ ದಿನದ ಯುದ್ಧ ನಡೆದಿರತ್ತೆ, ಇನ್ನೂ  ಕರ್ಣನನ್ನ ಕೊಲ್ಲದ ಅರ್ಜುನನನಿಗೆ ಯುಧಿಷ್ಠಿರ ಸಿಟ್ಟಿನಿಂದ ಹೇಳ್ತಾನೆ, ಅರ್ಜುನ ನಿನ್ನ ಗಾಂಡೀವ ಬಿಸಾಕಿಬಿಡು ಯಾಕೆ ಬೇಕು ನಿನಗೆ ಅಂತ. ಆಗ ಅರ್ಜುನ ಖಡ್ಗ ತಗೆದು ಯುಧಿಷ್ಠಿರನ್ನ ಕೊಲ್ಲಕ್ಕೆ ಹೋಗ್ತಾನೆ. ಅಲ್ಲೇ ಇದ್ದ ಕೃಷ್ಣ ಕೇಳ್ತಾನೆ, ಯಾಕಪ್ಪ ಹಿಂಗೆ ಮಾಡ್ತಾ ಇದ್ದೀಯ ಅಂತ. ಆಗ ಅರ್ಜುನ ಹೇಳ್ತಾನೆ,  ನಾನು ನನ್ನ ಗಾಂಡೀವಕ್ಕೆ ಅಪಮಾನ ಮಾಡಿದವರನ್ನ ಕೊಲ್ಲುತ್ತೇನೆ ಅಂತ ಶಪಥ ಮಾಡಿದಿನಿ ಅದಕ್ಕೆ ಅಂತಾನೆ.
ಆಗ ಕೃಷ್ಣ ಹೇಳ್ತಾನೆ, ಅಷ್ಟೆ ತಾನೆ ಹಾಗಿದ್ರೆ ನಿನಗೆ ಹಿರಿಯನಾದ ಯುಧಿಷ್ಟರನ್ನ  ಮನಸೋ ಇಚ್ಛೆ ಬೈದು ಬಿಡು, ಅದು ಅವನನ್ನು ಕೊಂದಹಾಗೆ ಆಗುತ್ತೆ ಅಂತ. ಅರ್ಜುನ ಎಲ್ಲ ಹಳೆಯ ಸಿಟ್ಟನ್ನೆಲ್ಲ ಒಟ್ಟುಗೂಡಿಸಿ ಸರಿಯಾಗಿ ಅವಹೇಳನ ಮಾಡಿಬಿಡ್ತಾನೆ. ಅದರ ನಂತರ, ಅವನು ಚೂರಿ ತೆಗೆದು ಆತ್ಮಹತ್ಯೆ ಮಾಡ್ಕೊಳಕ್ಕೆ ಹೋಗ್ತಾನೆ, ಆಗ ಕೃಷ್ಣ ಕೇಳ್ತಾನೆ ಈಗೇನಾಯ್ತೋ ಮಾರಾಯ ಅಂತ, ಅರ್ಜುನ ಹೇಳ್ತಾನೆ ಹಿರಿಯರನ್ನು ಬೈದಮೇಲೆ ನಾನು ಅವ್ರಿಗೆ ಮುಖ ತೋರಿಸ್ಕೊಂಡು ಬದುಕೋದು ಹೇಗೆ, ಅದರ ಬದಲು ಸಾವೇ ಶ್ರೇಷ್ಠ ಅಂತ ಸಾಯ್ತಿದಿನಿ ಅಂತ. ಕೃಷ್ಣ ಹೇಳ್ತಾನೆ ಇದಕ್ಕೂ ಉಪಾಯ ಇದೆ, ಇವಾಗ ನೀನು ನಿನ್ನನ್ನೇ ಚೆನ್ನಾಗಿ ಹೊಗಳಿಕೊ, ಅದು ನಿನ್ನ ಆತ್ಮಹತ್ಯೆ ಮಾಡಿಕೊಂಡ ಹಾಗೆ ಅಂತ ಹೇಳ್ತಾನೆ.
ತಾತ್ಪರ್ಯ : ದಿನಬೆಳಗಾದ್ರೆ, ಹಿರಿಯರ ವಯಸ್ಸಿನ ಅರಿವಿಲ್ಲದೆ, ಹಿರಿಯರ ಜ್ನ್ಯಾನದ ಬಗೆಗಿನ ತಿಳುವಳಿಕೆಯಿಲ್ಲದೆ ಬೈತಾ ಇರ್ತೇವೆ, ನಾವು  ಎಷ್ಟು ಕೊಲೆ ಮಾಡಿದ ಪಾಪದ  ಮೂಟೆ  ಹೊತ್ತಿದ್ದೇವೋ ಗೊತ್ತಿಲ್ಲ .. ಆಮೇಲೆ ನಾಲ್ಕಾಣೆ ಸಹಾಯ ಮಾಡಿ ನನ್ನಿಂದಲೇ ಅವನ ಜೀವನ ಉದ್ದಾರ ಆಯಿತು ಅಂತ ಹೇಳ್ಕೊಂಡು ಒಡಾಡ್ತಿವಿ, ಇದ್ರಿಂದ ನಮ್ಮ ಆತ್ಮಹತ್ಯೆ ಎಷ್ಟು ಮಾಡ್ಕೋತೀವೋ ಅರಿವಿಲ್ಲ. ಇಲ್ಲಿ ನಿಜವಾಗಲೂ ನಮ್ಮ  ಆತ್ಮಾವಲೋಕನ ಅತ್ಯಗತ್ಯ. - ಶರ 

ಜೋಕುಗಳು

ಹಳೇ ಗಾದೆ : ಕೈ ಕೆಸರಾದರೆ ಬಾಯಿಗೆ ಮೊಸರು 
IT ಗಾದೆ : ಕೈಗೆ ಮೌಸ್ ಸಿಕ್ಕಿದ್ರೆ (ಕೆಲಸ ಸಿಕ್ರೆ) ಬಾಯಿಗೆ ಮ್ಯಾಕ್ ಡಿ, ಕೆಎಫ್ಸಿ, ಪಿಜ್ಜಾ ಬರ್ಗರ್ರು 

-------------------------------------------------------------------------------------------------------------------------------------------




ಕಥೆಗಳು


ಒಂದು ಸಲಿ ಒಬ್ಬ ಬ್ರಾಹ್ಮಣ ಸಂಚರಿಸುವಾಗ ರಾತ್ರಿ ಆಗಿರತ್ತೆ ಅವನು ಅಲ್ಲೇ ಒಂದು ಹಳ್ಳಿಯ ಮನೆಗೆ ಹೋಗಿ ಉಳಿಲಿಕ್ಕೆ ಜಾಗ ಕೇಳ್ತಾನೆ. ಆ ಮನೆಯ ಯಜಮಾನ ತುಂಬಾ ಖುಷಿಯಿಂದ ಅವ್ರಿಗೆ ಭೋಜನದ ವ್ಯವಸ್ಥೆ ಮಾಡಿ ಮಲಗೋ ಮೊದಲು ಅವನ ಮನೇಲಿದ್ದ ಹಸುವಿನ ರುಚಿಯಾದ ಹಾಲು ಕೊಡ್ತಾನೆ. ಅದನ್ನು ಕುಡಿದು ಮಲಗಿದ ಬ್ರಾಹ್ಮಣ ರಾತ್ರಿ ಈ ಹಾಲು ಎಷ್ಟು ರುಚಿಯಾಗಿದೆ ಈ ಹಸು ನನಗೆ ಬೇಕು ಅಂತ ಅನ್ನಿಸಿ ಬೆಳಗಾಗುವುದರೊಳಗೆ ಅದನ್ನ ಅಪಹರಿಸಿ ಎದ್ದು ಹೋಗಿಬಿಡುತ್ತಾನೆ.
ಬೆಳಗ್ಗೆ ಎದ್ದ ಮೇಲೆ ಆ ಯಜಮಾನ ಹಸು ಇಲ್ಲದ್ದು ನೋಡಿ, ಅಯ್ಯೋ ನಾನೇ ಬ್ರಾಹ್ಮಣನ ಅವಶ್ಯಕತೆ ಅರಿತು ದಾನ ಮಾಡಿಬಿಡಬೇಕಿತ್ತು...ಇರಲಿ ಅವ್ರನ್ನ ಹುಡುಕಿಕೊಂಡು ಹೋಗಿ ಸಿಕ್ಕರೆ ಅಲ್ಲೇ ದಾನ ಮಾಡಿ ಬಿಡೋಣ ಅಂತ ಹೊರಡುತ್ತಾನೆ. ದಾರೀಲಿ ಹೋಗುತ್ತಾ ಇದ್ದ ಬ್ರಾಹ್ಮಣ ಅಯ್ಯೋ ಎಂಥ ತಪ್ಪು ಮಾಡಿದೆ ಅನ್ನಿಸಿ ಹಸುವನ್ನು ವಾಪಸ್ ಕೊಡೋಣ ಅಂತ ಬರ್ತಾನೆ. ಇಬ್ಬರು ದಾರಿ ಮದ್ಯದಲ್ಲಿ ಸಿಕ್ಕಾಗ ಬ್ಬ್ರಾಹ್ಮಣ ಹಸು ಕೊಟ್ಟು ಕೇಳ್ತಾನೆ ನಂಗೆ ಎಂದು ಬರದ ಕಳುವು ಮಾಡೋ ಬುದ್ದಿ ಯಾಕೆ ಬಂತು ಅಂತ. ಆಗ ಕೇಳ್ತಾನೆ ರಾತ್ರಿ ನನಗೆ ಕೊಟ್ಟ ಊಟ ನಿನ್ನ ಮನೆಯದ್ದ ಅಂತ. ಆಗ ಯಜಮಾನ ಹೇಳ್ತಾನೆ, ಇಲ್ಲ ನಮ್ಮ ಮನೆಯಲ್ಲಿ ಎಲ್ಲ ಅಡುಗೆಯ ಪದಾರ್ಥ  ಖಾಲಿಯಾಗಿತ್ತು ನನ್ನ ಪಕ್ಕದ ಮನೆಯವರ ಬಳಿ ತಂದು ಅಡುಗೆ ಮಾಡಿದ ಪದಾರ್ಥ ಅಂತಾನೆ. ಆಗ ಆತನ ಪಕ್ಕದ ಮನೆಯವನು ಎಲ್ಲಿಂದ ದುಡಿದು ತಂದ ಪದಾರ್ಥ ಅಂತ ಹಿನ್ನಲೆ ಹುಡುಕಿದಾಗ ಗೊತ್ತಾಗತ್ತೆ ಅದು ಅಧರ್ಮ ಮತ್ತು ಕಳ್ಳತನದಿಂದ ದುಡಿದು ತಂಡ ಪದಾರ್ಥ ಅಂತ. ಅದನ್ನು ಉಂಡ ಬ್ರಾಹ್ಮಣನ  ಬುದ್ದೀಲಿ  ಎಂದೂ  ಬರದ ಕಳ್ಳತನದ ಬುದ್ದಿ ಬಂದಿರತ್ತೆ.
ತಾತ್ಪರ್ಯ : ನಾವು  ನಿತ್ಯ ದುಡಿದು ತಿನ್ನುವ ಅನ್ನ ನ್ಯಾಯ ನೀತಿ ಮಾರ್ಗದಲ್ಲದಿದ್ದರೆ, ಅದು ನಮ್ಮ ಮತಿಯ ಹಾಗು ಭವಿಷ್ಯಕ್ಕೆ ಮಾರಕವಾಗೋದು ಖಂಡಿತ.
ಅದಕ್ಕೆ ನಮ್ಮ ಡಿವಿಜಿ ಹೇಳ್ತಾರೆ ಅಣ್ಣ ಉಣುವಾಗ ಕೇಳು ಅದು ನಿನ್ನ ಬೆಮರಿನ ಫಲವೋ ಇಲ್ಲ ಪರರ ಕಣ್ಣೀರೋ ಅಂತ....ಎಷ್ಟೇ ಆದರು ಸ್ವಾಭಿಮಾನದ ಉತ್ತಂಗದಲ್ಲಿ ಬದುಕಿ ಹೋದ ದಾರ್ಶನಿಕರಲ್ಲವೆ. ಜೀವನ ತುಂಬಾ ಮೌಲ್ಯವಾದದ್ದು ಅದನ್ನ ಶ್ರೇಷ್ಠವಾಗಿ ಬದುಕಿ ಸಾರ್ಥಕತೆ ಪಡೀಬೇಕು.  - ಶರ

--------------------------------------------------------------------------------------------------------------------------

ಒಂದು ಸಾರಿ ಕರ್ಣ ದಾನ ಮಾಡುವಾಗ ಎಡಗಡೆ ಇರುವ ಒ೦ದು ಬಿಂದಿಗೆ ತೆಗೆದು ಬ್ರಾಹ್ಮಣರಿಗೆ ದಾನ ಮಾಡ್ತಾನೆ. ಇಸ್ಕೊಂಡ ಮೇಲೆ ಬ್ರಾಹ್ಮಣರು ಆಕ್ಷೆಪನೆ ಮಾಡ್ತಾರೆ, ಅಯ್ಯೊ ಎಡಗೈನಲ್ಲಿ ಕೊಟ್ರಿ ಅಪಚಾರ ಆಯಿತು ಅಂತ. ಆಗ ಕರ್ಣ ಹೆಳ್ತಾನೆ ಅದು ಬಂಗಾರದ ಬಿಂದಿಗೆ ಎಲ್ಲಿ ಎಡ ಕೈ ಇಂದ ಬಲ ಕೈಗೆ ತಗೊಳೊ ಅಸ್ಟರಲ್ಲಿ ಮನಸ್ಸು ಬದಲಾಗಿ ಕೊಡಬೇಡ ಬಂಗಾರದ್ದು ಅನ್ನುತ್ತೊ ಅಂತ ಹಾಗೆ ಕೊಟ್ಟೆ ಅಂತಾನೆ.
ತಾತ್ಫರ್ಯ : ದಾನ ಮಾಡೊ ಇಚ್ಛೆ ಬಂದಾಗ ಬುದ್ದಿಗೆ ಅನಿಸಿದ ಕೂಡಲೆ ಕೈಯಿಂದ ಕಾರ್ಯಗತ ಮಾಡಿಬಿಡಬೇಕು. ವಿಚಾರ ಮನಸ್ಸಿಗೆ ಹೊದ್ರೆ ಮಾನವಸಹಜ ಆಸೆ ಆವರಿಸಿ ಎಲ್ಲವು ನನಗೆ ಇರಲಿ ಅನ್ನಿಸಿಬಿಡತ್ತೆ. - ಶರ
--------------------------------------------------------------------------------------------------------------------------